Sunday, December 9, 2018

ನನ್ನ ಮತ

ನನ್ನ ಮತ
ಪ್ರಭುತ್ವದ ಕಳೆ ತೊಲಗಿ
ಹುಲುಸು ಬೆಳೆಗೆ ನನ್ನ  ಮತ
ಸಮಾನತೆ ಸಹ ಬಾಳ್ವೆಗೆ ನನ್ನ ಮತ 
ಇಳೆ  ನಿನ್ನ ದಾನ
ಬೆಳೆ ನಿನ್ನ ದಾನ
ಸುಳಿದು ಬೀಸುವ ಗಾಳಿ
ನಿನ್ನಯ ದಾನ
ಕೊಳೆ ತೊಳೆಯಲು
ವಿಶ್ವ ಬಂಧುತ್ವಕ್ಕೆ
ನನ್ನಯ ಮತದಾನ
ನನ್ನ ಮತದಾನ ಮಾಡುವ
ಮುನ್ನ ನಾ ಮಾರಲಾರೆ
ಮತದಾನ
ಭಿನ್ನತೆ ಮರೆತ
ಮಾನವತೆಗೆ  ನನ್ನ ಮತ
ಜಾತಿ ಮತ ಪಂಥ ಮಿತಿ
ಮೀರಿದ
ಸತ್ಯ ಸಂದರಿಗೆ
ನನ್ನ ಮತ
ನಿತ್ಯ ನರಕ ತಪ್ಪಿಸಿ
ಅಪ್ಪಿಕೊಂಡು ನಡೆವ
ಸತ್ಪ್ರಜೆಗಳಿಗೆ ನನ್ನ  ಮತ 
ಧನ ದಾನ್ಯ ಆಮಿಷಕೆ
ಬಲಿ ಬೀಳದ ಮತ
ಇದು ಅಮೂಲ್ಯ ಮತ
ದೇಶ ಸೇವೆಗೆ ಈಶ ಸೇವೆಗೆ
ಮಾನವ ಸೇವೆಗೆ
ನನ್ನ ಮತ


No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...