Monday, April 20, 2020

* ಸಮರಸವೆ ಜೀವನ *

ಭಾವಗೀತೆ

ಸಾಕು ಮಾಡು ಸಾಲು ಮಾತು
ಸಕಲವು ಇದರಲ್ಲಿ ಸಿಗುವುದೆನಿತು
ಸಪ್ತ ಸ್ವರದ ಹಾಡು ಕಲಿತು
ನಿತ್ಯ ರಮಿಸುವುದು ತಿಳಿಯಿತು// ಪ//

ಮಲ್ಲಿಗೆ ಸೇವಂತಿಗೆ  ಮಾರು ತಂದು
ಮೆಲ್ಲಗೆ ಗಲ್ಲಕೆ ನವಿರು ಬೆಲ್ಲವಿಂದು
ಬೇಸಿಗೆ ಸುಟ್ಟ ಭುವಿಯ ಮಣ್ಣಿಗೆ
ಮುಂಗಾರು ಮಳೆ ಸುರಿಯಿತಿಂದು //

ಕಾಲದಾ ಕಹಿ ಕಷ್ಟ ಏನೇ ಇರಲಿ
ಕಡಲುಬ್ಬರ ಸೊಕ್ಕಿ ಉಕ್ಕಿ ಬರಲಿ
ಕವಲು ದಾರಿಯ ತೆವಲು ನನ್ನದಲ್ಲ
ಸಿಡಿಲು ಬಂದಡರಿದರು ಕದಲಲ್ಲ//

ಸಕಲವು ಇದ್ದು ಸಹನೆ ಗೆಲ್ಲದ
ಸುಕುಮಾರಿ ಹಿಂದೆ ಬಿದ್ದವನು ನಿನಲ್ಲ
ಸರಿಯಾದ ದಾರಿಯ ನನ್ನ ನಲ್ಲ
ಸಂಸಾರಕೆ ನೀ ಹೆದರ ಬೇಕಿಲ್ಲ//

        ಬಸನಗೌಡ ಗೌಡರ 

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...