Saturday, April 18, 2020

ಎಚ್ಚರ

ನಾವಂದಷ್ಟು ಸರಳವಲ್ಲ ಜಗತ್ತು
ನಿಷ್ಕಾಳಜಿ ಮಾಡಿದರೆ ಅಪತ್ತು
ಅವರು ಬಿದ್ದದ್ದು ಎರಡು ಹೊತ್ತು
ಹೆಣ್ಣು ಹೊನ್ನು ಮಣ್ಣು ಬನ್ನು  //

ಬಳಗವೆಲ್ಲ ಬರುತ್ತೆ ,ಬಂದಾಗ ಆಪತ್ತು
ಅದು ನಂದಾ ಅವರದಾ ಅವರವರೆ
ಬೆಳೆಸಿದ ಅವರೆ ನಿರ್ಮಿಸಿದ ಜಗತ್ತು
ಅದು ಬಿಡಿಸಲು ಬೇಕು ತಾಕತ್ತು //

ಹಿಗೊಬ್ಬ ಪೆದ್ದ ಪ್ರೀತಿಯ ಗುಂಗಿನಲೆದ್ದ
ನಾನೇನು ಕಡಿಮೆ ತಾಜ್ ಮಹಲ್
ಕಟ್ಟುವೆನೆಂದ, ಬೆಳಗಾಗುವದರಲ್ಲಿ
ತಾನೆ ತೊಡಿದ ತನ್ನ ಗೋರಿಯಲ್ಲಿದ್ದ. //

ಮಗದೊಬ್ಬನಿದ್ದ ಹಾಕಿದ್ದು ದ್ವಿಗುಣ,
ಗಲ್ಲಿ ಗಲ್ಲಿ ಸಾರಿದ್ದ, ಸುದ್ದಿ ತಿಳಿದದ್ದೆ ತಡ
ಕೂಡಿಟ್ಟ ಹಣ,ತಂದಾಕಿ ಸಾಲು ಸಾಲು
ಬೆಳಗಾಗುತ್ತಲೆ ಅಸಾಮಿ ಜೈಲು ಪಾಲು //

ಸಣ್ಣ ವಿಷಯಕ್ಕೂ  ಸಾವಿರ ಭಾಷಣ
ಮಣ್ಣಿನ ವಿಷಯಕ್ಕೆ ವಿಭೂಷಣ
ಕುರಿ ಕೋಳಿ ಸಿಂದಿ ಸರಾಬು ಸೇವೆ
ಬೆಳಗಾಗುವದರಲ್ಲಿ ಜನನಾಯಕ //

            🖋️ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...