Thursday, April 9, 2020

ಎಚ್ಚರಿಕೆ

ಎಚ್ಚರಿಕೆ

ನನ್ನ  ನಿನ್ನ ನಡುವೆ ಏನಿ ಅಂತರ
ಕಣ್ಣಿಗೆ ಕಾಣುವ ಕಾಣದಂತರ//

ಜಗದ ಜೀವ ತಿಂದು
ಸಾಗಿಸಿದೆ  ಕಾಲ ಕಾಲಾಂತರ ಹೆದರಿಸುವ ಕಾಲ ಬಂತು
ನುಸುಳಿತು  ಗಂಡಾಂತರ.//

ಹೆಸರು ಇಟ್ಟೆ ಕರೆ ಕೊಟ್ಟೆ
ಸಾಕು ಹೋಗು  ಮುರಾಬಟ್ಟಿ
ನಮ್ಮ ನಡುವೇ ಅಂತರ
ನಡುವೇ ಕುಣಿದಾಡಿ ಬಿಟ್ಟೆ//

ಮಾನವ ಬದಕು ಗಟ್ಟಿ
ಗೊತ್ತು ಕಣೊ ಮಸಾಲಿ ಕುಟ್ಟಿ
ನೀನಲ್ಲ ನೂರು ಬರಲಿ
ತೋಡುವೆವು ಗೊರಿ ಅಲ್ಲಿ

ತಿಳಿಯ ಬೇಕಿತ್ತು ಒಗ್ಗಟ್ಟ
ಅದಕ್ಕೆ ಹಾಕಿದೆ ಚೌಕಟ್ಟು
ಮುರಿದರೆ ಅದೆ ಬಿಕ್ಕಟ್ಟು
ಮರೆಯದೆ ಬರಬೇಡಿ ಮನೆ ಬಿಟ್ಟು//

ನಿಮ್ಮನ್ನ ನೀವು ಕೊಲ್ಲುದಕ
ನಿಸ್ಸೀಮರೆಂದು  ತೋರಿಸಿದ್ದಕ್ಕ
ಬರಬೇಕಾತು  ಮಣಿಸೋದಕ್ಕ
ಮರೆತರೆ ಬರುತ್ತೆನೇ   ಎಚ್ಚರಿಸೊದಕ್ಕ//

             
        🖋️    ಬಸನಗೌಡ ಗೌಡರ


 


       

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...