Thursday, May 7, 2020

* ಕುದಿಮೌನ *


ಸುಪ್ತಭಾವ ಒಪ್ಪದೆ ಹೊರ ಬಂದು
ಆಪ್ತರಿಗೆ ಪರಿತಪಿಸುತಿದೆ ನೊಂದು
ಪರಿಹರಿಸ ಬಲ್ಲಿಯಾ ಪ್ರಿಯೆ ಇಂದು
ಚೈತನ್ಯ ತುಂಬು ಬಾ ಮರಳಿ ಬಂದು/

ನಾ ಮಾಡಿದ ಮಹಾ ತಪ್ಪಾದರೆನು ?
ನಿನ್ನ ಮುಂದೆ ಹೊಗಳಿದೆ ಆವಳನ್ನು
ಹೃದಯ ಕೊಟೆಗೆ ಸಾವಿರ ಬಾಣ
ಚುಚ್ಚಿ ಚುಚ್ಚಿ ಕೊಲ್ಲಬೇಡ ನನ್ನನ್ನು /

ಅಂತರಾಳದ  ಕುದಿಮೌನ ಹೆಪ್ಪುಗಟ್ಟಿ
ಮೇಲ ಮೈ ಮನ ಒದ್ದಾಡಿ ಮರಗಟ್ಟಿ
ವಿಲವಿಲ, ನೆಲದಲ್ಲಿ ಗೀಚಿದೆ ಕುಲಗೆಟ್ಟು
ಗೀಚಿದ ಗೆರೆಗಳ ನಕ್ಕವು ನನ್ನ ನೊಡಿ /

ಕಾಯಿಸದೆ ಕರುಣೆ ತೊರಿ ಅಪ್ಪಿ ಬಿಡು
ಕಾಲು ಕೀಳೆನು ಅಪ್ಸರೆ ತಪ್ಪಿ ಬಂದರು
ಮದಿರೆ ಮುದ್ದಿಸಿ ಮೋರಿ ದಾಸನಂತೆ
ತಿರುಗುವ ಮುನ್ನ ಕೃಪೆಮಾಡು ಕಾಂತೆ

               ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...