Tuesday, May 26, 2020

* ಆರಕ್ಷಕ *



ಕೊರೊನಾ ಕರ್ತವ್ಯ ಈ ಸೈನಿಕ
ಗಡಿಸೈನಿಕನಿಗೇನು ಕಡಿಮೆ ಆರಕ್ಷಕ
ಮನೆಯ ಬಾಗಿಲೆ ಗಡಿಯಂತೆ
ಮಡದಿ ಮಕ್ಕಳ ತನು ಮುಟ್ಟದಂತೆ//

ಕಾಣದ ವೈರಿಗಳ ಕಡು ಆಕ್ರಮಣ
ಕುಟುಂಬದ ಭಾವಗಳ ಅಲುಗಾಟ
ಮುಂದಿದ್ದರು ಮುಟ್ಟದ ಗೂಣಗಾಟ
ಮುಖ ನೋಡಿ ಮನಸ್ಸು ತಾಕಲಾಟ//

ಮುತ್ತುವ ಹತ್ತು ಭಾವಗಳ ತತ್ತರಿಸಿ
ತುತ್ತು ಇಳಿಯಲು ತಿಣಕಾಡುತಿದೆ
ಹೆತ್ತ ಕರುಳೆ ಜಾರಿದಂತೆ ಹಿಚುಕಿದೆ
ಕರ್ತವ್ಯ ಕೂಗು ಸದಾ ಕುಕ್ಕುತಿದೆ//

ಬಿಸಿಲುಗಾಳಿ, ಹುಸಿಮಾತಿಗೆ ಹೆದರರು
ಸತತ ಕಾಲಿಗೆ ಚಕ್ರಕಟ್ಟಿದವರಿವರು
ಕಾಕಿ ಸಡಲಿಸಿ ಗಂಜಿಗೂ ಪುರಸೊತ್ತಿಲ್ಲ
ದಣಿವಾರಿಸಲು ಪವಡಿಸಲಾಗಲಿಲ್ಲ //

         ಬಸನಗೌಡ ಗೌಡರ 

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...