Saturday, May 16, 2020

* ಗೆಳೆಯನ ಹಂಬಲ *

ಅಳಿಯದ ಅಚ್ಚಳಿಯದ ಅವಿನಾಶದ
ಅವಿನಾಭಾವ ಸಂಬಂಧದ, ಮಹಲು
ನಿರ್ಮಿಸಲೊಬ್ಬ ಗೆಳೆಯನ ಹಂಬಲ.
ಅನುದಿನ ಕಾಯುತಿರುವೆ ಗೆಳೆಯ//

ಡೋಲಿ ಹೊರಸಲಲ್ಲ ಹೊರಲು ಅಲ್ಲ
ನಮನ ಕೇಳಲಲ್ಲ ಬಯಸುವದು ಇಲ್ಲ
ಅಪ್ಪಿ ಆತ್ಮೀಯ ಹೆಗಲು ನೀಡಲು.
ಅನುದಿನ ಕಾಯುತಿರುವೆ ಗೆಳೆಯ//

ಪಡ್ಡೆ ಹುಡುಗ ಶತದಡ್ಡ ಜಾಣರಲ್ಲ
ವಿಶೇಷಣಗಳೆ ಶತವಿದ್ದ ಕಾಲದಲ್ಲಿ
ಕಣ್ಣುತಪ್ಪಿಸಿ ಜೀರಬಾವಿ ಜಿಗಿದಂತೆ
ಜೊತೆಗಿರಲು ಕಾಯತಿರುವೆ ಗೆಳೆಯ

ಬೇವು ಏರಿ ಮಾವಿಗೆ ಕಲ್ಲು ಹೊಡೆದು
ಬಾರಿಯ ಗಿಡದ ಮಸಲತ್ ಮಾಡಿ
ಮಾಲಿಕ ಬೆತ್ತ ನೀಡದರೂ ಬಿಡದಂತೆ
ಜೊತೆಗಿರಲು ಕಾಯತಿರುವೆ ಗೆಳೆಯ//

ಎದುರು ಹೊಗಳಿ ನಂತರ ತೆಗಳದ
ವಾಚಾಳಿಯಂತೆ ತಲೆಯೆಲ್ಲಾ ತಿನ್ನದ
ಸಾಚಾನೆಂದು ನಂಬಿಸಿ ಹುಸಿನಗೆಯ
ಬೀರದ ಮೌನಿಗೆ ಕಾಯುತಿರುವೆ ಗೆಳೆಯ//

             ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...