Thursday, July 16, 2020

* ಮಗ್ಗಲು ಮುಳ್ಳು *

ಹಲವು ಕಲಹ ಹೆಕ್ಕಿ ತಿಕ್ಕಿ ಮುಕ್ಕುತಿವೆ 

ಬಯಲು ದಾರಿಯಲಿ ಬುಸುಗುಡುತಿವೆ

ಹಾಲು ಕುಡಿದು ಹಾಲಾಹಲ ಕಕ್ಕುತಿವೆ 

ಸಾಲು ಸಾಲು ಸಮಸ್ಯೆಗಳ ಸರಮಾಲೆ

ಏರುವ ಮಂಚದ ಕಾಲುಗಳೆ ಮಾಯೆ
ಪವಡಿಸಿದ ಪಲ್ಲಂಗ ಉರಗ ಛಾಯೆ
ಸುಖದ ಸುಪ್ಪತ್ತಿಗೆಯದು ಬರಿ ಭ್ರಮೆ
ನೀನಿಡುವ ಪ್ರತಿ ಹೆಜ್ಜೆ ಸರಿಯಿಲ್ಲದಿರೆ

ಲಂಚದ ಮಂಚ ಏರಬಯಸಿದೆ ಕೆಂಚ
ಸಂಚು ಮಾಡಬೇಕು ಹಂಚಿ ತಿನ್ನಬೇಕು
ಕೊಂಚ ಎಡವಟ್ಟಾದರು ಸಂಚಾಕಾರ
ಪವಡಿಸ ಬಿಡದೆ ಕಾಡುವುದು ಮಂಚ

ಮಂಚವೇರಲು ಮತಿಗೆಟ್ಟು ತಿರುಗಾಟ
ಮೈಮುರಿದು ದುಡಿಯದೆ ಹುಡಗಾಟ
ಹಾಸಿಗೆ ಹಾವಾಗಿ ಹೂವು ಮುಳ್ಳಾಗಿ
ಹಗಲಿರುಳು ಬೆನ್ನತ್ತುವುದು ಶಾಪವಾಗಿ

ಕಾಲವೆ ಕೈ ಚೆಲ್ಲಿ ಕುಳಿತು ಕಲಿರಾಯ
ಕತ್ತು ಹಿಡಿದೆಳೆದಾಗ ಹಿತವರಾರಿಹರು
ಸತಿಸುತರು ತಂದು ಹಾಕುವಾಗಿಹರು
ಸತ್ತರೆ ಕುಣಿವರೆಗೆ ಮಾತ್ರ ಬರುವರು

            ಬಸನಗೌಡ ಗೌಡರ
 


No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...