Saturday, July 18, 2020

* ವಿಕಾಸ *

ಮಂಗನಿಂದ ಮಾನವ ಬೆಳೆದ ನಿರಂತರ
ವಿಕಾಸದ ಹಾದಿಯು ಬಹು ಸುಂದರ 
ನಾಲ್ಕು ಕಾಲು ಬಳಸಿ ಎರಡೆ ಉಳಿಸಿದ
ಎಲೆ ತಿಂದು ಮಾಂಸಕೆ ಬಲೆ ಬಳಸಿದ //

ಮರದ ಎಲೆ ಕಾಯಿ ಹಣ್ಣು ಮಾಯ
ಹುಲ್ಲು ಬೆಳೆಯಿತು, ಹಸಿವಿನ ಗಾಯ 
ಹಿಡಿದ ಕಲ್ಲು ಬಿಲ್ಲು, ತಿಂದ ಸತ್ತ ಪ್ರಾಣಿ 
ಸಡೆಸಿದ ಬಾಳು, ಉಳಿಸಿಕೊಂಡ ಪ್ರಾಣ//

ವಂಶವ ಬೆಳೆಸಿದ, ಆಹಾರಕ್ಕದು ತತ್ತರ        
ಸರಳ ಜೀವನಕದು ನಾಗರಿಕತೆ ಉತ್ತರ
ಚಕ್ರದ ಶೋಧ, ತಿರುಗಿದ ನಿರಂತರ 
ನಿಲ್ಲದಂತೆ ಬೆಳೆದ ಬಹು ಎತ್ತರೆತ್ತರ //

ವಿಕಸನದ ಹಾದಿ  ವಿಶ್ಮಯ ತಂದೆ
ಎಲೆ ತಿಂದವನಿಂದು ಮರ ನುಂಗಿದ
ಮಣ್ಣು ನುಂಗಿದ, ಮತ್ತೆ ಕಲ್ಲೆ ನುಂಗಿದ
ಮಾನವ ಮನಷ್ಯನ್ನುಂಗತಾನ ಮುಂದ//

ಬತ್ತಲೆಯವನ ದೇಹ ಮುಚ್ಚಿತಂಬರ 
ಮತ್ತೆ ತೆರೆದು ತೋರಿಸದಿರು ದೇಹ
ಮನಗಾನು ಮನವೆ ಬೇಡ ಸಮರ
ಮೌನದಿಂದ ಗೆದ್ದವರಿದ್ದಾರೆ ಸಾವಿರ //

                  ಬಸನಗೌಡ ಗೌಡರ 

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...