Tuesday, July 7, 2020

ಬಾಗು ಮನ


ಅನುದಿನವು ಬರಿ ಚಪಲಕೆ ಮಾತಾಡಿ
ಅರೆಕ್ಷಣವೂ ಓದದೆ ಬರೆಯುವೆ ಕೊಡಿ
ಆರು ಓದುವವರು ಈ ನಿನ್ನ ಕವನ
ಅರಳುಮರಳು ಹಿಡಿದ ಮುದಿ ಜೀವನ//

ಬೇಟೆಯಾಡಿದಂತೆ ನಾಟಕವಾಡಿ
ಸರಿಸಾಟಿಯಲ್ಲದವರ ಜೊತೆಗೂಡಿ
ಸಮಾಜಸೇವೆ ರಂಗತಾಲೀಮು ಮಾಡಿ
ಕುಣಿದು ಬೆತ್ತಲಾಗಿ ನಿಲ್ಲುವೆ ಹಾಡಿ//

ಬಂಜರು ನೆಲದ ಭತ್ತದ ಹುಡಕಾಟ
ಬಿರುಗಾಳಿಗೆ ಸಾಲುಗಳೆಲ್ಲ ಅಲುಗಾಟ
ಭಾಗುವ ಗಿಡ ಬದುಕುವುದು ದಿಟ
ಬಾಗದೆ ಬಗ್ಗದೆ ನಿಲ್ಲಲು ಯಾಕಿ ಹಠ//

ಮಾಡಿದ ಪಾಪಗಳೆ ಮೇಲೆರಗುವವು  
ಮಧ್ಯರಾತ್ರಿಯಲ್ಲಿ ಬಿರುಗಾಳಿಯಾಗಿ
ಮಾಡಿದ ಪುಣ್ಯಗಳೆ ಸುರಿಯುವವು
ಮಾಮರದ ಮಂದ ಮಾರುತಗಳಾಗಿ //

ಮನಪರಿವರ್ತನೆಗೆ ಮಿಸುಕಾಡಿತಾ ಹಿಡಿ 
ಮಾವುತಗೆ ಮಣಿಯಲಾರದೆ ಆ ಕರಿ
ಅಂಕುಶವೆ ಕಿರಿದೆಂದು ಬಿಂಕವ ಬಿಡು
ಅಂಕೆಯಲಿಡಲು ಸಂಕೀರ್ತನೆ ಹಾಡು//

         ಬಸನಗೌಡ ಗೌಡರ 





No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...