Friday, October 2, 2020

* ಗಾಂಧಿ ತಾತ *

ಗಾಂಧಿ ತಾತ ನಿನ್ನ ಶಾಂತಿ ವಚನ 
ಕೆಲವರಿಗೆ ಆಗ ಹತ್ತಿದೆ ಅಪಚನ/
ಆಗಲಿ ಬಿಡಿ ಕೆಡುವುದು ಉದರವಿದಿನ
ಕೆಟ್ಟ ಮೇಲೆ ಬರುವುದು ಸುದಿನ //

ಶಾಂತಿ  ಅಹಿಂಸೆಯ ಪರಿಪಾಲನೆ
ಕೆಲ ಬೋಧಕರಿಗಾಗಿದೆ ವಿವರಣೆ /
ಸಾಧಕರಿಗದು ಸಮಯ ಪಾಲನೆ
ಪಾಲನೆಗೆ ಸಿಗತ್ತೆ ಲೇಟಾಗಿ ಮಣೆ//

ಹಿಂದೂ ಮುಸ್ಲಿಮರ ಐಕ್ಯತಾ ಮಂತ್ರ 
ಜಿನ್ನಾನ ಮುಂದೆ ನಡೆಯಲಿಲ್ಲ ತಂತ್ರ/
ಹೆಣೆದ ವಿಭಜನೆಗೆ ಮಹಾ ಕುತಂತ್ರ
ದಳ್ಳುರಿಗೆ ಬೆಂದ ಮೇಲೆ ದೇಶ ಸ್ವತಂತ್ರ //

ಗಾಂದೀಜಿ ಬ್ರಿಟಿಷರಿಗೆ ಹಾಕಿ ಸವಾಲು
ತಂದರು ಸ್ವತಂತ್ರ ಕೇಳಲಿಲ್ಲ ಪಾಲು/
ಸಾಧಿಸಿದೆನೆಂದು ಹೇಳದ ಸಾಧಕ
ಸವೆದು ಶ್ರೀಗಂಧ ಸೂಸಿದ ಸೇವಕ//

ನನ್ನ ಮಾಡಬೇಡಿ ನೀವು ಮೂರ್ತಿ
ಹೇಳಿದ ಅದು ನನಗಲ್ಲ ತರುವ ಕೀರ್ತಿ/ 
ಆದರೆತತ್ವಕ್ಕಿಟ್ಟಿವು ತಿಲಾಂಜಲಿ ಪೂರ್ತಿ
ಮರೆತಿಲ್ಲ ಭಾಷಣದಲ್ಲಿ ಬರತೈತಿ ಸರತಿ//

      ಬಸನಗೌಡ ಗೌಡರ 


No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...