Wednesday, October 21, 2020

* ಆಕ್ರಂದನ *

ಉಂಡವನಿಗೆ ತಿಳಿಯದು ಹಸಿದವನ ದಾಹ 

ಬಂಡೆಳವ ಮುನ್ನ ನೀಡುಬೇಕು ಜಾಣ

ಇಂದು ನಿನ್ನದು ನಾಳಿನ್ನಾರದು ನಾಕಾಣೆ

ಉಣಿಸುವ ಕರದಲಿರುವುದಿವರ ಪ್ರಾಣ//

 

ಬೀದಿ ಬದಿಯಲ್ಲಿ ಭಿಕ್ಷೆ ಬೇಡುವರೆ

ಹಿಡಯಷ್ಟು ಪ್ರೀತಿಯ ನೀಡಿದರೆ

ಕೈಲಾದಷ್ಟು ಹೊಟ್ಟೆಗೆ ಹಿಟ್ಟು ಕೊಟ್ಟರೆ

ಕೈಚಾಚಿ ಪಡೆವರೆ  ಬಡತನ ಹಿಂಗಿದರೆ


ಅನ್ನ ನೀಡುವ ಕೈಗಳು ಸದಾ ಮೇಲಿವೆ

ಅರಿಯದೆ ಹರಿದು ತಿನ್ನುವ ಕರಗಳಿವೆ

ಅರೆಗಂಜಿಗಾಗಿ ಇವರೆಲ್ಲರ ಆಕ್ರಂದನ

ಹರನಿಲ್ಲವೆ ನೀಡಿ ಮರೆಯಲು ಮೇಲೆ/ 


ತಿಳಿಯದೆ ತೆವಲಿಗೆ ತಂದರು ಭೂಮಿಗೆ  

ತಂದೆ ತಾಯಿ ಸಮಾನರಿವರು ಹಂದಿಗೆ

ತಿರಿದು ತಿನ್ನುವ ಮಕ್ಕಳದಲ್ಲದು ತಪ್ಪು

ಪೊರೆವಂತೆ ನಟಿಸುವವನಾವ ಬಗೆ //


        ಬಸನಗೌಡಗೌಡರ


No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...