Friday, January 1, 2021

* ನೆನಪು *

ಮರೆತೆನೆಂದರ ಮರೆಯಲಿ ಹ್ಯಾಂಗ 
ಮರೆಯದೆ ಕಾಡತಾವ, ನೆನಪು 
ಮತ್ತೆ ಮತ್ತೆ ಇಂದು  //ಪ//

ಮೀನು ಹಿಡಿಯಲು ಗಾಳ ಕೊಂಡೆವು
ಹೊಟ್ಟೆ ತುಂಬಲೆಂದು, ಬಿರುಗಾಳಿಗೆ
ಉರಳಿದಾಗ ನಾವು  ದಡ ಕಾಣದೆ
ಮುಳಿಗಿದೆವಿಂದು //
 
ಮಂಗಳನಂಗಳದ ಕನಸು ಕಂಡೆವು 
ಮನದಾಗೊಂದು, ಕೊರೋನಾ 
ವಕ್ಕರಿಸಿ ಅಂಗಳದಾಗ ಬರಾಕ 
ಹೆದರತೀವಿಂದು // 

ಸೂರ್ಯನ ಸೃಷ್ಟಿಯ ಮಾಡುವೆವು
ಅಲ್ಲೊಂದು, ಸಿಟ್ಟಾದ ಸಾಗರ
ಉಕ್ಕಿಹರಿದಾಗ ತೀರ ಹರಕು
ಮುರುಕು ಇಂದು //

ಹೈಟೆಕ್ ಕಾರು ಖರೀದಿಸಿದೆವು 
ಹಾಯಾಗಿ ಬದುಕಲೆಂದು, ಕಾಲ
ಮಿಕ್ಕಿ ಕಾಲು ಹಿಡಿದಾಗ ಸಾಲು  
ಜೊಲಿ ಹೊಡಿಯಿತಿಂದು//

ಹೊಸ ವರ್ಷ ಹರುಷ ಕಂಡೆವು
ಈರ್ಷೆ ಬೇಡವೆಂದು, ಮತ್ತಿನ 
ಘರ್ಷನೆ ಬೆಳೆದಾಗ ವರ್ಷದ
ನೀತಿ ಅಳಿಯಿತಿಂದು //


No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...