Thursday, April 1, 2021

* ಮೌನದಲ್ಲಿ ಮರೆತಾಗ *

ಎಡ ಬಲದ ನಡುವೆ ಬೇಡ ಗೋಡೆ 
ಎರಡರಲ್ಲೂ ಉಂಟು ಕೊಳಚೆ ರಾಡಿ
ಹರಿದು ಹೋಗಲಿ ನಿತ್ಯ ಅದು ಕೋಡಿ
ಸೇತುವೆ ಕಟ್ಟೋಣವಲ್ಲಿ ಜೊತೆಗೂಡಿ//

ನಿತ್ಯ ಹಾಕಿದರೆ ಕೊಳಚೆ ಆಚೆ ಈಚೆ 
ಸಿಡಿಯದಿರುವುದೆ ಮುಖಕ್ಕೆ ಪಾಚಿ 
ಸತ್ಯ ತಿರುಚಲಾಗದು, ಗೋಡೆ ಹಾಕಿ
ಸಿಡಿಸಬೇಕು ಗೆಳೆಯ ಬಾಂಬ್ ಹಾಕಿ//

ನಡೆವಾಗ ಎಡುವುದು ಸಹಜ ಕೋಡಿ  
ಸ್ವಾರ್ಥದಿಂದ ಮಾಡಿದರಿವರು ಗಡಿಬಿಡಿ
ಸವಕಳಿ ಸಿದ್ದಾಂತ ಕೇಳಿ ಆಗಿದೆ ಕಿವುಡು
ಸಾಗು ನೀ ತೊಳೆಯಲು ಹಿಡಿದು ಜಾಡು//

ಬರಹದ ಬಣವೆಯಲ್ಲಿ ಸಾವಿರ ಸಾಕ್ಷಿ
ಸಾರಿಸಿ ನೀ ಕಲಕಬೇಡ ಕರುಣೆ ಮಿಕ್ಕಿ 
ಸಾಹಸವು ಉಬ್ಬಿ ನಡೆಯಲಲ್ಲ ಸೊಕ್ಕಿ
ವಿರಹವನ್ನೆ ಮೀರಿ ತೆಗೆಯಬೇಕು ಅಕ್ಷಿ//

ಮೌನದಲ್ಲಿ ಮರೆತಾಗ ಏರಿದೆ ಗೋಡೆ
ಮನ ಬಿಚ್ಚಿ ಮಾತನಾಡಲೇನು ದಾಡಿ
ನಡುವೆ ಸಿಕ್ಕವರ ಬಾಳು ನಾಯಿಪಾಡು  
ಮಾತಾಗಲಿ ಮಾನವೀಯತೆ ಹಾಡು//
         
          ಬಸನಗೌಡ ಗೌಡರ

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...