ಸುಮಾರು 25 ವರ್ಷಗಳ ಹಿಂದಿನ ಮಾತು, ಆಗ ನಾನು ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಕಾಲ . ಆದರೆ ವಾಸ ಮಾತ್ರ ಪಕ್ಕದ ನಗರದಲ್ಲಿ ಇತ್ತು .ಹೀಗಾಗಿ ದಿನನಿತ್ಯ ಓಡಾಡುವುದು ನನ್ನ(ನಮ್ಮ) ದಿನಚರಿ.ಬಸ್ ಕಾಯುವುದು ಕೂಡಾ ಕರ್ತವ್ಯದ ಒಂದು ಭಾಗವೆ ಆಗಿತ್ತು. ಕಾಯುವುದು ಅಂತ ಹೇಳಿದೆನಲ್ಲವಾ ಇದರ ತ್ರಾಸು ನಮ್ಮ ಶತೃವಿಗೂ ಬೇಡ .ಏಕಂದರೆ ಇದರಿಂದಾಗುವ ಹಿಂಸೆ ಅಪಾರ, ಅದಕ್ಕೆ ನಾನು ಹೇಳಿದ್ದು ಶತೃವಿಗೂ ಬೇಡ ಎಂದದ್ದು.ನಾನು ಕರ್ತವ್ಯ ನಿರ್ವಹಿಸಿದ ಊರಿಗೆ ಮತ್ತು ವಾಸವಿದ್ದ ನಗರಕ್ಕೆ 10 ರಿಂದ 12 ಕಿ.ಮೀ. 15 ನಿಮಿಷದ ಪ್ರವಾಸ, ಕಾಯುವ ಅವಧಿ ಮಾತ್ರ 1 ರಿಂದ 2 ಗಂಟೆ ಈ ಅವಧಿಯನ್ನು ಇನ್ನಾವುದಾದರು ಸೃಜನಾತ್ಮಕ ಕೆಲಸಕ್ಕೆ ಬಳಸಬಹುದಾಗಿತ್ತೇನೂ ಆದರೆ ಹಾಗಾಗಲಿಲ್ಲ. ಹೇಗೆಂದರೆ ಒಂದು ಎರಡು ಗಾಲಿ ವಾಹನ ಇಟ್ಟಿದ್ದರೆ ? ಇವತ್ತಿನ ಹಾಗೆ ಬೈಕು ನಮಗೆ ಎಟುಕವ ವಸ್ತುವಾಗಿರಲಿಲ್ಲ ಏಕೆಂದರೆ ಆವಾಗ ಇವತ್ತಿನ ಹಾಗೆ ಐದು ಅಂಕಿ ಸಂಬಳವಿರಲಿಲ್ಲ ಬದಲಾಗಿ ನಾಲ್ಕು ಅಂಕಿ ಸಂಬಳವಿರುತಿತ್ತು ಮತ್ತು ಜೀವನಾನುಭವವು ಕಡಿಮೆಯೆ. ಅವತ್ತಿನ ಸಂಬಳ ಇವತ್ತಿನ ಸಂಬಳಕ್ಕೆ ಹೋಲಿಸಿದರೆ ಕಡಿಮೆಯೆ. ಇರಲಿ ವಿಷಯಕ್ಕೆ ಬರುತ್ತೇನೆ.ಒಂದು ದಿನ ಬಸ್ ಸ್ಟ್ಯಾಂಡ ಇರುವ ಪಕ್ಕದ ಗಿಡದ ಬಹು ದೊಡ್ಡ ಕಟ್ಟಿಗೆ ಕುಳಿತುಕೊಅಂಡು ಲೋಕದ ಎಲ್ಲಾ ಸಮಸ್ಯೆಗೆ ಪರಹಾರ ಕಂಡು ಹಿಡಿಯುವವರಂತೆ ಚರ್ಚೆ ಮಾಡುತ್ತಾ ಕುಳಿತು ಕೊಂಡಿದ್ದೆವು ನಮ್ಮ ಎಲ್ಲಾ ಶಿಕ್ಷಕರು . ಆಗ ನಾವು ಹೋಗುವ ದಾರಿಗೆ ವಿರುದ್ಧವಾಗಿ ಒಂದು ಬಸ್ ಬಂದು ನಿಂತಿತು.ಕಾಯುವವರ ಹಣೆಬರಹವೆ ಹೀಗೆ... ನಾವು ಹೋಗುವ ಕಡೆ ಬರದೆ ವಿರುದ್ಧವಾದ ದಿಕ್ಕಿನಲ್ಲಿ ಬಸ್ಸು ಬಂದು ನಿಲ್ಲುತ್ತದೆ ಹಿಂಸೆಯಾದಂತ ಅನುಭವ......ನಮ್ಮ ವಿರುದ್ಧ ವಾಗಿಯೆ ಬಹಳ ಬಸ್ಸುಗಳು ಬಂದಂತೆ ಬಾಸವಾಗುತ್ತದೆ......! ಅದು ಕಾದವರಿಗೆ ಗೊತ್ತು ಬಿಡಿ... ನೋಡು ನೋಡುತ್ತಿದ್ದಂತೆ ನಿಂತ ಬಸ್ಸನಲ್ಲಿ ಒಬ್ಬ ಹುಡಗ ಇಳಿದ, ಎತ್ತರವಾದ ನಿಲುವು ದುಂಡಾದ ಮುಖ, ದಟ್ಟವಾದ ನೀಟಾಗಿ ಕ್ರಾಪ್ ಮಾಡಿಸಿದ ಕೂದಲು ಗುರುತು ಹಿಡಯಲು ಬಹಳ ವೇಳೆಯೇನು ತೆಗದುಕೊಳ್ಳಲಿಲ್ಲ.ಅವನೆ ಪೋಲೀಸ ಪಾಟೀಲ್ ಅವನ ಹೆಸರು ಮಾತ್ರ ನೆನಪಿಲ್ಲ ಯಾಕೆಂದರೆ ನಾವು ಬಿಜಾಪುರ ಜಿಲ್ಲೆಯವರಾಗಿರುದರಿಂದ ಹೆಸರಿಗಿಂತ ಆಡ್ರೆಸ್ ಗೆ ಬಹಳ ಮಹತ್ವ ಕೊಡುವವರಲ್ಲವೆ.... ಇರಲಿ,ನಗುಮೊಗದಿಂದ ಕೈಮುಗಿಯುತ್ತ ನನ್ನ ಕಡೆ ಓಡಿ ಬಂದು " ಆರಾಮು ಇದ್ದೀರಾ ಸರ್" ಎಂದು ಕೇಳಿದ ನಾನು ಅಷ್ಟೇ ನಗುತ್ತಾ ಕುಶಲೋಪರಿ ಕೇಳುತ್ತಾ ಪಾಟೀಲ್ "ಡಿಗ್ರಿ ಮುಗಿಯಿತಾ ,ಬಿ.ಇಡಿ ಏನಾದರು ಮಾಡಿದೆಯಾ" ಎಂದು ಕೇಳಿದೆ.ಇಲ್ಲ ..."ಬಿ. ಎ. ಮುಗಿಸಿದೆ ಬಿ ಇಡಿ ಮಾಡ ಲಾಗಲಿಲ್ಲ ಸರ್" ಎಂದ ಹಾಗದರೆ ಜೀವನಕ್ಕೆ ಏನು ಎಂದು ಕೇಳಿದೆ. ಅದಕ್ಕೆ ಆತ ಕೊಟ್ಟ ಉತ್ತರ ಇವತ್ತಿಗೂ ಕೂಡಾ ನನ್ನ ಸ್ಮೃತಿಪಟಲದ ಮೇಲೆ ಉಳಿಯುವಂತೆ ಮಾಡಿದೆ..ಆದೇನಂದರೆ. ಸರ್ ನಾನು ಕಲಿತ ಬಿ.ಎ. ಪ್ರಮಾಣ ಪತ್ರ ನನಗೆ ಉಪಯೋಗಕ್ಕೆ ಬಾರದೆ ಹೋಗಿರಬಹುದು ಆದರೆ ತಾವು ಕಲಿಸಿದ ಇಂಗ್ಲಿಷ್ ಮಾತ್ರ ನನಗೆ ಅನ್ನ ಹಾಕಿದೆ" ಎಂದ... ಮುಂದುವರಿದು,ಆ ಭಾಷೆಯ ಮೇಲನ ನನ್ನ ಹಿಡಿತ ನನಗೆ ದಾವಣಗೆರೆಯಲ್ಲಿ ಪ್ರತಿಷ್ಠಿತ ಗಿರಣಿಯಲ್ಲಿ ಉದ್ಯೋಗ ದೊರೆಯುವಂತೆ ಮಾಡಿದೆ ಸರ್ ಎಂದಾಗ ನನ್ನ ಕಣ್ಣುಗಳು ಆರ್ದ್ರಗೊಂಡವ, ಗುರುವಾದವನಿಗೆ ಇದಕ್ಕಿಂತ ಶ್ರೇಷ್ಠವಾದ ಆದಾಯವೇನಿದೆ ಹೇಳಿ ? ಇದಕ್ಕೂ ಕಾರಣವಿದೆ ಸೇವೆಗೆ ಸೇರಿದ ಆರಂಭದಲ್ಲಿ ಅದೆ ಹಳ್ಳಿಯಲ್ಲೇ ವಾಸವಾಗಿದ್ದೆ ಮತ್ತು ಕಲಾ ವಿಷಯ(ಸಮಾಜ ವಿಜ್ಞಾನ) ನನ್ನದಾದರೂ ಆಗಿನ ನನ್ನ ಮುಖ್ಯೋಪಾಧ್ಯಾಯರು ಇಂಗ್ಲಿಷ್ ಭಾಷೆಯ ಬೋಧನೆ ನೀಡಿ 10 ದಿನ ತರಬೇತಿಗೆ ಕಳುಹಿಸಿದ್ದರು ಸ್ಪರ್ಧೆಯ ಮನೋಭಾವ ಹೊಂದಿರುವ ನನಗೆ ಅದು ಬಾರವೆಂದು ಅನಿಸಲೇ ಇಲ್ಲ. ಬದಲಾಗಿ ಹಳ್ಳಿಯ ಮಕ್ಕಳಿಗೆ ಸ್ಪರ್ಧಾತ್ಮಕ ಭಾಷೆಯನ್ನು ಕಲಿಸುವ ಅವಕಾಶ ಸಿಕ್ಕಿತು .ಶಾಲೆಯ ಒಳಗೆ ಮತ್ತು ಬಿಡುವಿನ ವೇಳಯನ್ನು ಮಕ್ಕಳಿಗೆ ಇಂಗ್ಲಿಷ್ ವ್ಯಾಕರಣ ಕಲಿಸುವದರಲ್ಲಿ ಕಳೆದೆ ಅದರ ಫಲವೆ ಈ ಪಾಟೀಲ್...! ಕಲಿಸುವ ಉಪಾಧ್ಯಾಯನ ನಿಜವಾದ ಆಸ್ತಿ ಅಂದರೆ ಇದೆ ಅಲ್ಲವೆ ?.
Subscribe to:
Post Comments (Atom)
*ಅಪ್ಪ ನಮ್ಮೆಲ್ಲರ ಛಪ್ಪರ *
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...
No comments:
Post a Comment