Tuesday, May 25, 2021

* ಚಲುವೊಂದೆ ಗೆಲುವಲ್ಲ ಕುಲಕೆ *

ಕವಲು ದಾರಿಯಲಿ ನಿಂತು ...
ನವಿಲು ನಾ ಕುಣಿಯಬಹುದೆ/
ಬಯಲೂ ಬೇಕು,ನಿನ್ನೊಲವು ಬೇಕು
ಚೆಲುವೊಂದೆ ಗೆಲುವಲ್ಲ ಕುಲಕೆ //

ಸಾವಿರ ಕಣ್ಣು ಸಾಲದು ಎನ್ನೊಳು 
ಸವಿಯಲು, ಸವೆಯಬೇಕು ಬಾಳು / 
ಸಾವಿನ ಮನೆಯವರೆಗೆ ಇದೆ ಗೋಳು
ಸುಮ್ಮನೆ ದುಡಿಯ ಬಂದ ಜೀತದಾಳು

ನರಿ ನಾಯಿ ಭಯದ ಚಿಂತೆ
ಹರಿಯಿಲ್ಲದೆ ತಿರುಗುವದುಂಟೆ /
ವರ ಬೇಕು ಕಾಡುಮೃಗ ಕೈಹಾಕದಂತೆ
ಇರುವ ಭಾಗ್ಯವ ನೆನೆಯಲು ನಿಂತೆ//

ಹಾಡುವ ಹಕ್ಕಿಗೆ ಜಿಗಿಯುವ ಚಿಟ್ಟೆಗೆ
ಬಾಡಿ ಅರಳುವ ಹೂವಿಗಿಲ್ಲ ಕೂರತೆ/
ಹೆಡೆ ಎತ್ತಿದ ಹಾವಿಗಿದೆ ಹುಳಹುಪ್ಪಡಿ 
ಅಡಿಗಡಿಗೂ ಇದೆ ಅನ್ನದ ಜೋಪಡಿ//

ದಟ್ಟಡವಿಯಲ್ಲಿ ಕಟ್ಟುತಿರುವೆ ಮನೆ
ಇಟ್ಟಂತೆ ಇರುವುದು ಸೃಷ್ಟಿಯ ಗಂಟು/
ಬಿಟ್ಟಿರಬಹುದೆ ಗಿಡಮರ, ಬಳ್ಳಿ ನಂಟು
ಗಟ್ಟಿಯಾಗಿ ಕುಣಿಯವೆ ಶಿವನುಂಟು//


                    ಬಸನಗೌಡ ಗೌಡರ 

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...