Friday, June 11, 2021

* ಕನಸಿನ ಕಿವಿಮಾತು *

 ದತ್ತ ಪದ : ಕನವರಿಕೆ

  * ಕನಸಿನ ಕಿವಿಮಾತು * 

ಎದೆಯ ಭಾರ ಹದವಾಗಿ ಕಲೆತು
ಹೃದಯ ಗಾನ ಪಲ್ಲವಿ ಮೊಳೆತು/
ಪದಗಳ ನಾದ  ಸ್ವರಗಳಲಿ ತೇಲಿತು
ಇದು ಯಾವ ಕನಸಿನ ಕಿವಿ ಮಾತು//

ಬಣ್ಣದ ಭಾವತರಂಗ ಬಾಗಿ ಬೆಸೆದು 
ಬಣ್ಣಿಸಲು ಹಣ್ಣಾದೆ ನಾ ಬಸವಳಿದು/
ಕಣ್ಣಿಗೇರಿದ ಕಾಡಿಗೆ ಕಾರ್ಮೋಡ ಸೀಳಿ
ಮಣ್ಣಿಗೆ ಜಾರಿತು ಮುಂಗಾರು ಮಳೆ//

ಹರಿವ ನದಿಯ ನೊರೆ ಹೊರೆಯಾಗಿ 
ಹರಿದು ಬಯಲೆಲ್ಲಾ ಪ್ರವಾಹವಾಗಿ/
ಹೃದಯನಾಳ ತುಂಬೆಲ್ಲಾ ಕೊಳೆಯಾಗಿ
ಹರಿದಿದೆ ಹೊಳೆ, ಇಳೆ ಪ್ರಳಯವಾಗಿ//

ಕನಸು ಕಾಣುವೆ ಕನವರಿಕೆಯಲ್ಲ
ಸನಿಹ ಬಂದು ಸವಿ ನೀಡುವೆಯಲ್ಲ/
ಮನಸ್ಸು ಕದಿಯುವ ನಿನ್ನ ಜಾಲ 
ಮುನಿಸು ಬಂದು ಜಾರುವೆಯಲ್ಲ//

ಮುಂಗಾರು ಮಳೆ ಮುತ್ತಿಕ್ಕಿ ಮೂಗಿಗೆ
ಮುಂಗುರುಳು ಸೋತು ಹೆರಳಾಗಿ/
ತಂಗಾಳಿಯ ಶಕ್ತಿಗೆ ಸಪ್ತಸ್ವರವಾಗಿ 
ಸಂಗಾತಿ ಎನ್ನ ಸೇರು ಮೃದುವಾಗಿ//

           ಬಸನಗೌಡ ಗೌಡರ 
                      ಉಪನ್ಯಾಸಕರು

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...