Friday, July 23, 2021

ಗುರುವಿಗೊಂದು ನುಡಿನಮನ

ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ 
ವೇದಿಕಬರುವೆ ವನ ರಚನೆ ಸ್ಪರ್ಧೆ ಗಾಗಿ 

ಗುರುವೆ _ನುಡಿiನಮನ

* ಎರಗುವೆ ಗುರುವೆ *

ಎರಗುವೆ ಗುರುವೆ  ನಿನ್ನಯ ಚರಣಕೆ 
ಹರ ಹರಿ ಕಾಣುವೆ ನಿನ್ನಲಿ ಶಿರಬಾಗಿ/
ವರವ ನೀಡು ಗುರುವೆ ಶರಣು ಬರುವೆ 
ಅರಿವಿನ ಅಲೆಗಳು ಬೀಳಲಿ ನಮಗೆ//

ಅಂದಕಾರ ಅಳಿಸು ಚಂದದಿಂದ ಬೆಳೆಸು 
ಸುಂದರ ಬದುಕಿನ ಹಂದರ ಕೆಳಗಿಳಿಸು/
ವಂದಿಸಿ  ಬೇಡುವೆ ಅಜ್ಞಾನವ ಅಳಿಸು 
ಹೊಂದಿಸಿ ಸುಗುಣ ಕಲಿಸು ನಮಗೆ//

ಕಾಯದ ಮೇಲಿನ ಮೋಹ ಕಳಿಚಿಸು
ಗಾಯದ  ಮೇಲಿನ ನೆನಪನು ಅಳಿಸು/
ಧ್ಯೇಯ ಒಂದೆ ದೇವರ ಕಾಣಲು ಕಲಿಸು
ಭಯ ಕರಗಿಸಿ, ಭಕ್ತಿಯ ಕಲಿಸು ನಮಗೆ//

ಅಕ್ಷರ ಜ್ಞಾನದ ಭಿಕ್ಷೆಯ ನೀಡಿ ರಕ್ಷಿಸು
ಸಾಕ್ಷರ ಸಾಲದು ಸಂಸ್ಕಾರ ಕರುಣಿಸು
ಭಕ್ಷಿಸುವ ರಕ್ಕಸರ ಬಲೆಗಳನು ತಿಳಿಸು
ಶಿಕ್ಷಿಸಿ ಸನ್ಮಾರ್ಗ ತೋರಿಸು ನಮಗೆ //

      ಶ್ರೀ  ಬಸನಗೌಡ ಗೌಡರ
                         ಉಪನ್ಯಾಸಕರು 
ಬಾಲಕರ ಸ ಪ ಪೂ ಕಾಲೇಜು ಗುಳೇದಗುಡ್ಡ 

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...