Saturday, September 25, 2021

*ಮುತ್ತಿನ ಮಂಪರು *

ಸೌಂದರ್ಯ ಸೂಸಲು 
ನಿನ್ನ ವದನಕೆ ಚಂದನ 
ಬಳಿಯಬೇಕಿಲ್ಲ ಗೆಳತಿ/ 
ಚಂದದ ಮುಗುಳ್ನಗೆ ಸಾಕು 
ನಾ ನಿನ್ನ ಹಿಂದೆ 
ಭ್ರಮರದಂತೆ ಬರಲು//

ಒಂದೇ ಎರಡೇ ಕುಂಟು 
ನೆವಗಳು ಸಾಕು ನನ್ನಿಂದ ಸಾಗಲು/
ಕಣ್ ಸನ್ನೆ ಸಾಕು ಗೆಳತಿ,
ಸಮ್ಮತಿ ಸೂಚಿಸು ನಾ 
ಸ್ವರ್ಗದಲಿ ತೇಲಿ ಬರಲು//

ನೀನುಟ್ಟ ಸೀರಿಯ ಸೆರಗು 
ಹೊಂಬಣ್ಣದ ಬಿಸಿಲಿಗೆ ತಾಗಿ /
ಹಸಿರೆಲೆಯ ಮೇಲೆ 
ಹೊಸ ಕಾಮನ ಬಿಲ್ಲು 
ತುಂತುರು ಮಳೆ ಯಾಗಿ 
ನಾನು ತೂರಿ ಬರಲು//

ಭಾವಗಳ ಕಾರಂಜಿ 
ಜೀವನದ ಸೆಲೆಯಾಗಿ/
ನಾವು ಕೆತ್ತಿದ ಮೂರ್ತಿ 
ನಾಳೆಗಳ ಬುತ್ತಿಯಾಗಿ 
ಹೃದಯ ತಟ್ಟಿದೆ ಪ್ರೀತಿ
ಮರ ಸುತ್ತುವದು  ನಾ 
ಮೋಡವಾಗಿ ಬರಲು//
  
ಕಾನನದ ಬಯಲಲ್ಲಿ 
ಕನಸುಗಳ ಬೇರಲ್ಲಿ /
ಕವನಗಳು ಹೊರಚೆಲ್ಲಿ 
ಕತ್ತಲಾವರಿಸಿ ಮೌನ ಮೆತ್ತಿತು 
ಮುತ್ತಿನ ಮಂಪರು ಬರಲು//


ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...