Wednesday, October 20, 2021
ಬೆಳದಿಂಗಳ ಕಾವ್ಯ ಗೋಷ್ಠಿ
ಇಂದು ದಿನಾಂಕ 20.10.2021ರಂದು ಪ್ರೊ.ಚಂದ್ರಶೇಖರ್ ಹೆಗಡೆ ರವರ ಮನೆಯಲ್ಲಿ ಬೆಳದಿಂಗಳ ಕಾವ್ಯ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು ನನ್ನ ವಿದ್ಯಾಗುರುಗಳಾದ ಡಾ ವ್ಹಿ.ಎ.ಬೆನಕನಾಳ ಅಧ್ಯಕ್ಷತೆ ವಹಿಸಿದ್ದರು .ಡಾ.ರಾಜಶೇಖರ್ ಬಸುಪಟ್ಟದ,ಕನ್ನಡ ಸಾಹಿತ್ಯ ಪರಿಷತ್ ಗುಳೇದಗುಡ್ಡ ಘಟಕದ ಅಧ್ಯಕ್ಷರಾದ ಪ್ರೊ.ಸಿ ಎಮ್ ಜೋಶಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಪ್ರೊ.ಚಂದ್ರಶೇಖರ್ ಹೆಗಡೆಯವರ ಕಾವ್ಯನುಸಂಧಾನದ ಕನಸು ನನಸಾಯಿತು ,ಅದಕ್ಕೆ ಸೀಗಿ ಹುಣ್ಣಿಮೆಯ ಚಂದ್ರನ ಬೆಳದಿಂಗಳು ಸಾಕ್ಷಿಯಾಯಿತು.ಎಂತಹ ಸಂದರ್ಭ..! ಭಾರತೀಯರ ಪವಿತ್ರ ಮಹಾಕಾವ್ಯ ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಜಯಂತಿಯಂದು ನಡೆದ ಕಾವ್ಯ ಗೋಷ್ಠಿ ಗುಳೇದಗುಡ್ಡದ ಕಾವ್ಯಗೋಷ್ಠಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಾಯಿತು ಎಂದರೆ ತಪ್ಪಾಗಲಾರದು ಎನ್ನುವುದು ನನ್ನ ಭಾವನೆ.ಡಾ.ಚಂದ್ರಶೇಖರ ಕಾಳಣ್ಣವರ,ಡಾ.ಎಚ್ ಎಸ್ ಘಂಟಿ,ಮಹಾದೇವ ಜಗತಾಪ, ದಯಾನಂದ ಯಾನಮಶೆಟ್ಟಿ,ಶಿವು ಕರನಂದಿ,ಗುರು ಮನ್ನಿಕಟ್ಟಿ,ಸಿ ಆರ್ ಪಿ ಸುರಪುರ ಸರ್ ಕವನ ವಾಚನ,ಪಿ ಯು ಪಾಡಾರವರ ವಿಮರ್ಶೆ,ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳರ ಫೋಟೊಗ್ರಪಿ, ಧಾರವಾಡದ ವರ ಕವಿ.ದ.ರಾಬೇಂದ್ರೆ, ರಾಷ್ಟ್ರ ಕವಿ ಕುವೆಂಪುರವರ ಕಾವ್ಯಮನೆ ಯನ್ನು ನೆನಪಿಸುವಂತಿತ್ತು ಕನ್ನಡ ಸಾಹಿತ್ಯ ಪರಿಷತ್ ಗುಳೇದಗುಡ್ಡದ ಅಧ್ಯಕ್ಷ ಪ್ರೊ.ಸಿ ಎಮ್ ಜೋಶಿಯವರ ಸ್ವರಚಿತ ಭಾವಗೀತೆ ಹಾಗೂ ಶ್ರೀ ಚಿದಾನಂದ ಕಾಟವಾ ರವರ ಸುಶ್ರಾವ್ಯ ಗಾಯನಗಳು ಗಂಧರ್ವ ಲೋಕವನ್ನೇ ಸೃಷ್ಟಿಸಿದವು.ಡಾ.ರಾಜಶೇಖರ್ ಬಸುಪಟ್ಟದ ಕವಿಗಳ ಮಾರ್ಗದರ್ಶನ ಉದಯೋನ್ಮುಖ ಬರಹಗಾರರಿಗೆ ಸ್ಫೂರ್ತಿಯ ಚಿಲುಮೆಯಂತಿತ್ತು, ಕವಿಗಿರಬೇಕಾದ ಕಾವ್ಯ ಪ್ರಜ್ಞೆ ,ಅಧ್ಯಾಯನದ ಮಹತ್ವ ವನ್ನು ಎಳೆ ಎಳೆಯಾಗಿ ಬಿಡಿಸಿದ ಪರಿಗೆ ನಾನೋರ್ವ ಇತಿಹಾಸ ಉಪನ್ಯಾಸಕ ಎನ್ನುವುದು ಮರೆತು ಹೋಗಿ ಸಾಹಿತ್ಯ ಕಲಿಯುವ ವಿದ್ಯಾರ್ಥಿಯಾಗಿ ಬದಲಾಗಿದ್ದೆ.ಮಧ್ಯ ,ಮಧ್ಯ ಬರುವ ಪ್ರೊ.ಚಂದ್ರಶೇಖರ್ ಹೆಗಡೆ ಯವರ ನಿರೂಪಣೆ, ಕಾವ್ಯ ಕಸ್ತೂರಿ..! ನವಿಲು ನರ್ತಿಸಿ ,ಕೋಗಿಲೆಗಳ ಗಾನ ಹಾಡಿದಂತಿತ್ತು.ಉಪಮೆಯೊಂದಿಗೆ ರೂಪಕಗಳ ಮಾಲೆ ಮತ್ತೆ ಕೇಳಬೇಕೆಂದಿತ್ತು ಆದರೆ ಸಮಯ ಮುಗಿದಿತ್ತು.ಅಧ್ಯಕ್ಷತೆ ವಹಿಸಿದ ವಿದ್ಯಾ ಗುರುವಿನ ಸಮಾರೋಪ, ಅದು ಬಾಣ ಬಿರುಸಿನ ಚಮತ್ಕಾರ ಕವಿಮನಗಳಿಗಳ ಕವನಗಳನ್ನು ಉಪಗ್ರಹಗಳಿಗೆ ಹೋಲಿಸಿ ಚಂದ್ರಶೇಖರ್ ಹೆಗಡೆ ಯವರ ಮನೆಯನ್ನು ಲಾಂಚಿಂಗ ಪ್ಯಾಡ್ ಮಾಡಿದರಲ್ಲ ಇದಕ್ಕಿಂತ ಇನ್ನೇನು ಬೇಕು ಹೇಳಿ ?ನಾನು ವರಕವಿ ಬೇಂದ್ರೆಯವರ ಮನೆಯೂ ನೋಡಿಲ್ಲ, ರಾಷ್ಟ್ರ ಕವಿ ಕುವೆಂಪುರವರ ಮನೆಯನ್ನು ನೋಡಿಲ್ಲ ಅದು ಗುಳೇದಗುಡ್ಡ ದಲ್ಲಿ ಸೃಷ್ಟಿಯಾದರೆ ಯಾರು ಬೇಡ ಎಂದಾರು ? ಅವಕಾಶ ನೀಡಿದ ಸ್ನೇಹಿತ, ಕವಿ ಚಂದ್ರಶೇಖರ್ ಹೆಗಡೆಯವರಿಗೆ ನೂರು ನಮನಗಳು. ಶುಭರಾತ್ರಿ
Subscribe to:
Post Comments (Atom)
*ಅಪ್ಪ ನಮ್ಮೆಲ್ಲರ ಛಪ್ಪರ *
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...
No comments:
Post a Comment