Friday, January 14, 2022

* ಸಡಗರದ ಸಂಕ್ರಾಂತಿ *


ಸಂಕ್ರಾಂತಿ ಹಬ್ಬ ಸಡಗರದ ಹಬ್ಬ
ಬೆಳೆದ ಫಸಲು ತರುವುದೆ ಉಬ್ಬು/
ಇದು ಭೂ ತಾಯಿ ಮಗನ ಹಬ್ಬ
ಸವಿಯೋಣ ಹಲ್ಲಿದ್ದವರು ಕಬ್ಬು//

ಮಾಗಿಯ ಚಳಿಯು ಹೋಗುವ ಕಾಲ 
ಮೈತುಂಬ ಬಳದೇವ ಎಳ್ಳು ಬೆಲ್ಲ /
ಮನೆ ತುಂಬಾ  ಸಡಗರವೆಲ್ಲಾ 
ಮಣ್ಣಿನ ಮಗನ  ಬಾಳು ರಸಗುಲ್ಲ//

ಬೆಳದೇನ ಜೋಳ ರಾಗಿ ಭತ್ತ 
ಹಾಕೇನಿ ಹಗೆದಾಗ ಹತ್ತಿಪ್ಪತ್ತು /
ನನಗಿಲ್ಲ ಅನ್ನದ ಚಿಂತೆ ಇವತ್ತು 
ಮಳೆಯರಾಯ ನಿನದೊಂದೆ ಚಿತ್ತ//

ಬಸವಣ್ಣ ನಿನ ಮೈ ತೊಳದೇನು 
ಜೂಲಾ ಹಾಕೇನು ಸಾಲಾಗಿ ನಿಂತೇನು 
ಅಗಸ್ಯಾಗ ಡುರಕಿ ಹೊಡಸೇನು
ಸೊಗಸಾಗಿ ಬೆಂಕಿ ತುಳಸೇನು //

ಸಜ್ಜಿಯ ರೊಟ್ಟಿ ಸೇಂಗಾದ ಹೋಳಿಗೆ 
ಮುಳ್ಳ ಬದನೆಯ ಪಲ್ಯ ಮೇಲೆ ಗುರೆಳ್ಳ ಚಟ್ನಿ 
ಅವ್ವ ಹಾಕಿದ ಕೆನೆ ಕೆನೆ ಮೊಸರು 
ಸ್ವರ್ಗಕ್ಕೆ ಸವಾಲು ಹಾಕೇನು//


1 comment:

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...