ನಾವಿರೋದೆ ಹೀಗೆ..ಎಲ್ಲಿ ಹೋದರೆ ನಮಗೆ ಗೌರವ ? ಎಲ್ಲಿ ಕಲಿತರೆ ಹೆಚ್ಚು ಗೌರವ ?ಎಲ್ಲಿ ಕುಳತರೆ ಹೆಚ್ಚು ಗೌರವ ? ಯಾವ ಚೇರ ಮೇಲೆ ಕುಳಿತರೆ ನಮಗೆ ಗೌರವ ಸಿಗುತ್ತದೆ... ಎನ್ನುವ ಭೂತವನ್ನು ನಮ್ಮ ಜೊತೆಗೆ ಸದಾ ಇಟ್ಟು ಕೊಂಡಿರುತ್ತೇವೆ ..ಎನ್ರಿ ಇದು ಗೌರವ, ಗೌರವ ಅಂತಾ...ತೆಲೆ ಕೆರಿತೀರಾ, ಖಂಡಿತವಾಗಿಯೂ ನಾನು ಆ ಕೆಲಸ ಮಾಡದೆ ನೇರವಾಗಿ ಮುಖ್ಯ ವಾದ ವಿಷಯಕ್ಕೆ ಬರುತ್ತೇನೆ ನಾನು ಈಗ್ಗೆ ಕೆಲ ದಿನಗಳ ಹಿಂದೆ ಒಂದೂರಿಗೆ ಪ್ರಯಾಣ ಬೆಳೆಸಿದ್ದೆ ಆ ಸಂದರ್ಭದಲ್ಲಿ ಆದ ಒಂದು ಸಣ್ಣ ಘಟನೆ ಹಂಚಿಕೊಳ್ಳುವ ಮನಸ್ಸಾಯಿತು ಅದಕ್ಕಾಗಿ ಈ ಪೀಠಿಕೆ ಹಾಕಿದೆ ಅಷ್ಟೆ. ನನ್ನ ಜೋತೆ ಪ್ರಯಾಣ ಬೆಳೆಸಿದವರು ಒಬ್ಬರು ಉಪನ್ಯಾಸಕರೆ ! ಪ್ರಯಾಣ ಸುಖಕರವಾಗಿಯೆ ನಡೆದಿತ್ತು ಬಹು ದೂರದ ಪ್ರಯಾಣ ಎಂದರೆ ಕೇಳಬೇಕೆ ದಾರಿಯಲ್ಲಿ ಹಲವಾರು ಜನ ಹತ್ತುತ್ತಾರೆ ಹಲವಾರು ಜನ ಇಳಿಯುತ್ತಾರೆ. ಆ ಪ್ರಶ್ನೆ ಬೇರೆ ..ಮಾರ್ಗ ಮಧ್ಯದಲ್ಲಿ ಒಬ್ಬರು ಸ್ಫರದ್ರೂಪಿ ಯುವಕ ಅಂದರೆ ಮೂವತ್ತು ಮೂವತೈದು ವರ್ಷದ ತರುಣ ಬಸ್ಸಿಗೆ ಏರಿದ ಆತನೊಬ್ಬ ಶಿಕ್ಷಕನೆಂದು ಅರಿತುಕೊಳ್ಳಲು ಬಹಳ ಸಮಯವೇನು ಹಿಡಿಯಲಿಲ್ಲ ಯಾಕೆಂದರೆ ನೀಟಾದ ಬಟ್ಟೆ ಇನ್ ಮಾಡಿದ ಶರ್ಟ್, ಮಾತು ಕೂಡಾ ತೂಕದ ಮಾತುಗಳೆ ಆಗಿದ್ದವು ಇರಲಿ, ವಿಷಯ ಅದಲ್ಲ ನಾವು ಜೊತೆಯಾಗಿ ಪ್ರಯಾಣಿಸದ ಸ್ನೇಹಿತರು ಲೋಕಾಭಿರಾಮವಾಗಿ ಮಾತಾಡಲು ಸುರುಮಾಡಿದಾಗ ಸಹ ಪ್ರಯಾಣಿಕನಿಗೆ ನಾವು ಉಪನ್ಯಾಸಕರು ಎಂದು ತಿಳಿಯಲು ಅವರೂ ಬಹಳ ಅವಧಿ ತೆಗೆದುಕೊಳ್ಳಲಿಲ್ಲ .ಪರಿಣಾಮವಾಗಿ ಬಸ್ಸಿನ ಕ್ಷಣದ ಬಾಂಧವ್ಯ ಬೆಸೆಯಲು ಬಹಳ ಸಮಯವೂ ಹಿಡಿಯಲಿಲ್ಲ. ತಕ್ಷಣವೇ ಅವರು "ನೀವು ಬೋಧಿಸುವ ವಿಷಯ ? " ಎಂದು ಕೇಳಿದರು ಆಗ ನನ್ನ ಸ್ನೇಹಿತರು ತಮ್ಮ ವಿಷಯವನ್ನು ಹೇಳಿ ನನ್ನ ವಿಷಯದೊಂದಿಗೆ ನನ್ನನ್ನು ಪರಿಚಯಿಸಿದರು ನಾನು ನಮಸ್ಕಾರ ಹೇಳಿ ಔಪಚಾರಿಕ ನಗೆ ಸೂಸಿ ಸುಮ್ಮನಾದೆ. ಆದರೆ ಇಬ್ಬರು ತಮ್ಮತಮ್ಮ ಸ್ನೇಹಿತರು ಎಲ್ಲಿ ಎಲ್ಲಿ ಇದ್ದಾರೆ ಎನ್ನುವುದನ್ನು ಹೇಳುತ್ತಾ ಪರಿಚಯ ಗಟ್ಟಿ ಮಾಡಲು ಸುರು ಮಾಡಿದರು .ನಾನು ಮೊದಲೇ ಕಿಡಕಿಯ ಹತ್ತಿರ ಕುಳಿತುಕೊಂಡಿದ್ದರಿಂದ ಮಧ್ಯ ಬಾಯಿ ಹಾಕುವ ಕೆಲಸ ಮಾಡಲಿಲ್ಲ ಕಾರಣ ಇಷ್ಟೆ... ಒಂದು, ಕಿಡಕಿಯಾದರೆ ಇನ್ನೂಂದು ಜನರೇಷನ್ ಗ್ಯಾಪ್ ...ಅಂದರೆ ಅದಕ್ಕೆ ವಯಸ್ಸಿನ ಅಂತರವೂ ಇರಬಹುದೇನೊ ...ಇರಲಿ ಈ ಅವಧಿಯಲ್ಲಿಯ ಒಂದು ಸನ್ನಿವೇಶ ನನ್ನ ಮನಪಟಲದಲ್ಲಿ ಉಳಿಯುವಂತೆ ಮಾಡಿದ್ದು ಅದೇನಂದರೆ ಪ್ರಯಾಣಿಕ ನನ್ನ ಸ್ನೇಹಿತನಿಗೆ ಕೇಳಿದ ಪ್ರಶ್ನೆ "ನೀವು ಯಾವ ವಿಶ್ವವಿದ್ಯಾಲಯದಲ್ಲಿ " ಎಮ್. ಎ .ಮಾಡಿದಿರಿ ? " ಪ್ರಶ್ನೆ ಏನೊ ಸುಲಬದ್ದೆ ಆದರೆ ಯಾವ ವಿಶ್ವವಿದ್ಯಾಲಯದಲ್ಲಿ ಎಮ್. ಎ. ಮಾಡಿದ್ದೀರಿ ಎನ್ನುವ ಪ್ರಶ್ನೆ ಆ ವಿಶ್ವವಿದ್ಯಾಲಯ ಗುಣಮಟ್ಟದ ಪ್ರಶ್ನೆ ಮಾಡಿದಂತೆ ಬಾಸವಾಯಿತೋ ಅಥವಾ ವಿಶ್ವವಿದ್ಯಾಲಯದ ಮೇಲೆ ಕಲಿತ ವಿದ್ಯಾರ್ಥಿ ಗುಣಮಟ್ಟದ ಮೇಲೆ ಅವರಿಗಿರುವ ಗೌರವದ ಹಾದಿ ಇರತ್ತೋ ನಾನರಿಯೇ ಆ ಮಾತು ಬೇರೆ, ಈಗ ನನ್ನ ಮುಖ್ಯ ವಾದ ವಿಷಯ ಏನು ಎಂದರೆ ಯಾವುದೆ ವಿಶ್ವವಿದ್ಯಾಲಯ ಒಂದರಿಂದಲೆ ಒಬ್ಬ ವ್ಯಕ್ತಿಯ ಗೌರವ ಹೆಚ್ಚಲಾರದು,ಯಾವುದೇ ಒಬ್ಬ ವ್ಯಕ್ತಿಯು ತನ್ನ ಸ್ವಸಾಮರ್ಥ್ಯದಿಂದ ವಿಶ್ವವಿದ್ಯಾಲಯದ ಘನತೆಯನ್ನು ಹೆಚ್ಚಿಸಬಲ್ಲ.ಯಾಕೆ ಈ ಮಾತು ಹೇಳುವೆನೆಂದರೆ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು ಜೀವನ ನಿರ್ವಹಣೆಯಲ್ಲಿ ಎಡವಿದ್ದಾರೆ! ಉದ್ಯೋಗ ಸಿಗದೆ ಅಲೆಯುತ್ತಿದ್ದಾರೆ ಕೂಡಾ... ಆದರೆ ಬಾಹ್ಯವಾಗಿ ಬರೆದು ತಮ್ಮ ಅನುಭವಗಳನ್ನು ಅದಕ್ಕೆ ಎರೆದು ಅದೆಷ್ಟೋ ಜನ ನನ್ನ ಸ್ನೇಹಿತರು ಐ ಎ ಎಸ್, ಕೆ ಎ ಎಸ್, ಪ್ರಾಧ್ಯಾಪಕರಾಗಿ ನಮ್ಮ ಎಡಬಲದಲ್ಲಿ ಇದ್ದಾರೆ .ಜೀವನದ ಪಾಠಕ್ಕಿಂತ ದೊಡ್ಡದಾದ ಪಾಠ ಇನ್ನೊಂದು ಇಲ್ಲ ಅದಕ್ಕೆ ಹೇಳಿದ್ದು "ಪ್ರತಿಭೆಗಳು ಗುಡಿಸಲುಗಳಲ್ಲಿ ಹುಟ್ಟುತ್ತವೆ " ಎನ್ನುವುದು.ಬಾಹ್ಯವಾಗಿ ಪರೀಕ್ಷೆ ಬರೆದ ನನ್ನ ಸ್ನೇಹಿತ ಜನರಲ್ ಕೆಟಗೆರಿಯಲ್ಲಿ ನೇಮಕವಾಗಿದ್ದು ವಿಶ್ವವಿದ್ಯಾಲಯದ ಒಂದರ ಹಂಗಿನಲ್ಲಿ ಅಲ್ಲ ,ಅಂದರೆ ವಿಶ್ವವಿದ್ಯಾಲಯಗಳೆ ಅಂತಿಮವಲ್ಲ ಅವು ನಮಗೆ ಆದಾರಗಳೆ ಹೊರತು ಗೌರವ ತಂದು ಕೊಡುವ ಅಂತಿಮ ಗಡಿಗಳಲ್ಲ ಇದರ ಅರ್ಥ ನನಗೆ ವಿಶ್ವವಿದ್ಯಾಲಯಗಳ ಬಗ್ಗೆ ಗೌರವವಿಲ್ಲ ಎಂದಲ್ಲ ಅಪಾರ ಗೌರವವಿದೆ. ಆದರೆ ವಿಶ್ವವಿದ್ಯಾಲಯಗಳು ಗೌರವದ ಸಂಕೇತಗಳಲ್ಲ ಎನ್ನುವುದನ್ನು ಅರ್ಥೈಸಿ ಕೊಳ್ಳಬೇಕಾಗಿದೆ .ಜ್ಞಾನ ಮತ್ತು ಮಾಹಿತಿಗಾಗಿ ಇಂದು ವಿಶ್ವ ವಿದ್ಯಾಲಯದಲ್ಲಿಯ ಪ್ರಾಧ್ಯಾಪಕರ ಮೇಲೆಯೇ ಸಂಪೂರ್ಣವಾಗಿ ಅವಲಂಬಿಸುವ ಕಾಲಘಟ್ಟದಲ್ಲಿ ನಾವು ಇಲ್ಲ. ಬದಲಾಗಿ ವಿಶ್ವವನ್ನು ವೀಕ್ಷಿಸಲು ಕಣ್ಣುಗಳ ಸಂಖ್ಯೆ ಅಪಾರವಾಗಿವೆ ಅವುಗಳಿಂದ ನೋಡಬೇಕಷ್ಟೆ .ಅದಕ್ಕೆ ವಿಶ್ವವಿದ್ಯಾಲಯದ ಹೆಬ್ಬಾಗಿಲು ಮೇಲೆ ಬರೆದಿದ್ದು "ಅರಿವೆ ಗುರು "ಎಂದು. ವಿಶ್ವವಿದ್ಯಾಲಯದ ಕ್ಷಮೆ ಕೋರುತ್ತಾ... ಜನರು ಇಂಥಹ ವಿಶ್ವವಿದ್ಯಾಲಯದಲ್ಲಿ ಓದಿದರೆ ಮಾತ್ರ ಶ್ರೇಷ್ಠ ಎನ್ನುವ ಮನೋಭಾವದಿಂದ ಹೊರ ಬರಬೇಕಾಗಿದೆ ಎನ್ನುವುದು ಮಾತ್ರ ನನ್ನ ಲೇಖನದ ಉದ್ದೇಶ.
Subscribe to:
Post Comments (Atom)
*ಅಪ್ಪ ನಮ್ಮೆಲ್ಲರ ಛಪ್ಪರ *
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...
No comments:
Post a Comment