Wednesday, January 24, 2024

ಕಣವಿಯವರಿಗೆ ನುಡಿನಮನ

 ಕನ್ನಡದ ಮೇರು ಕವಿ ಶ್ರೀ ಚನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ನುಡಿನಮನ 
ಸ್ಫರ್ಧೆಗಾಗಿ ಕವನದ  ಧ್ವನಿ ಮುದ್ರಣ 

* ಕನ್ನಡದ ಕನಸುಗಾರ *

ಸಾಹಿತ್ಯ ಕಣವಿಯಲಿ ಸಾವಿರ 
ಮರ ಬೆಳದ ಕಾವಲುಗಾರ.
ಚಿನ್ನದಂತ ಚನ್ನವೀರ ನೀವೆಮ್ಮ
ಕನ್ನಡ ಕಣಜ ಕಟ್ಟಿದ
ಕನಸುಗಾರ.//

ಭಾವಗಳಿಗೆ ಜೀವ ನೀಡುವ 
ಭವದ ಭಾಗ್ಯದ ಬಳೆಗಾರ 
ಹೊಂಬಳದಿ ನಂಬಿ ಬೆಳೆದ 
ಹೊಂಬೆಳಕಿನ ತುಂಬಾ ಸವಿಗಾರ//

ಬೆಂಬೆಳಕು ನೀಡಿ ಬೆಳೆದ 
ಸುನೀತಗಳ  ಸಾಮ್ರಾಟ್ .
ರಟ್ಟಿಗೂ ಗಟ್ಟಿ ಕಳೆ ನೀಡಿದ  
ಪಟ್ಟಿ ಕಿರಿಟದ ಪೇಟಗಾರ//

ನೀವಿಟ್ಟ ಹೆಜ್ಜೆಯ ಗುರುತು 
ಜ್ಞಾನ ಕಾಶಿಯಲಿ  ಸಂಚಾರ 
ನಾಡೆಲ್ಲ ಹಾಲು ಜೇನಾಗಿಸಿದ
ನವ್ಯಕಾವ್ಯ ಮನ್ವಂತರಗಾರ.//

ಮಾನವೀಯ ಮೌಲ್ಯಗಳ 
ವಿನಯದ ವಿಶಾಲ ಗುಣವಂತ .
ಕಾಣದಂತೆ ಮರೆಯಾದ  
ಸಂಸ್ಕಾರದ ಹೃದಯವಂತ.//

ಕನ್ನಡದ ತೇರು ಮುನ್ನಡೆಸಲು 
ಇನ್ನರಬೇಕಿತ್ತು ಅಕ್ಷರದ ಗಾರುಡಿಗಾರ. 
ಕಾಣದ ಕರವೊಂದು ಕರೆದು  
ಅನಂತ ಕವನವಾದ ಕಲೆಗಾರ.//


No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...