Saturday, October 15, 2022

ಒಬ್ಬಂಟಿ

ಈಗ ನಾನೊಬ್ಬ ಒಂಟಿ 
ಯಾಕೆಂದರೆ ಹೊಡೆಯುತ್ತಿರವೆ ಗಂಟೆ. 
ಚೆ.ಚೆ. ಪ್ರಾಯಶಃ ನೀವು ತಿಳಿದಂಗಲ್ಲ ...
ಅದು ಇನ್ನೂ ದೂರವಿದೆ ಸಂತೆ.
ಅಜ್ಜಿ ಕೇಳಿದ್ರು ..ಪಿಂಟು 
ಜಗವೆಲ್ಲ ಮಲಿಗಿದೆ ನೀನೇಕೆ ಎದ್ದೆ ?
ಎಷ್ಟಂತ ಮಲಗುವುದು ಅಂಟಿ, 
ಎಚ್ಚರಗೊಳ್ಳಲು ಹೊಡದೆ ಗಂಟೆ . 
ಮಗ್ಗಲು ಚರ್ಮ ಕೊಳೆಯಿತು
ಹಾಳಾದ ಮೂಳೆ ಸೆಳೆಯಿತು
ಎಷ್ಟೂಂತಾ ಮಲುಗಲಿ ?
ಅಜ್ಜಿ ಹೇಳಿತು ..
ಜಗವೆಲ್ಲ ಮಲಗಿರಲು ಎದ್ದವರೆಲ್ಲ ಗೆದ್ದವರೆ.
ಬುದ್ಧನೂ ಎದ್ದನಲ್ಲವೆ  ?
ಹೆಂಡತಿ ಮಗ ,ಅಷ್ಟೇ ಏಕೆ ರಾಜ್ಯವೆ !
ಕಂಥಕವೊಂದೆ ನಿಂತಿತ್ತು. 
ಬಹು ದೂರ ನಡೆದ 
ಚರ್ಮ ಬೋನಿಗಂಟಿತ್ತು
ಇಲ್ಲ ಜ್ಞಾನ ಪ್ರಾಪ್ತಿ .
ಅರಳಿ ಮರವೆ ಬರಬೇಕಾಯಿತು 
ಆಶೆಯೇ ದುಃಖಕ್ಕೆ ಮೂಲವೆಂದರಿಯಲು.
ತಿಳಿಯಲಿನ್ನೂ ಎಚ್ಚರಗೊಂಡಿಲ್ಲಾ....
ಎಚ್ಚರಗೊಳ್ಳಲು ಮಲಗಿರುವರೇನು ?  
ಮಲಗಿದಂತೆ ನಟಿಸಿದವರು ಅವರೆಲ್ಲಾ 
ಜೊತೆಗೆ ಇರಬೇಕಲ್ಲ... !
ಇಲ್ಲದಿದ್ದರೆ ವಿಷ ನೀಡುವರು 
ನಿನ್ನವರೆ ಬೇರಾರಲ್ಲ..!ಒಬ್ಬಂಟಿಯಾಗಿ ನಡೆದ
ಬುದ್ಧನಿಗೇನಾಯಿತು ?
ಬದ್ದ ವೈರಿಗಳೇನಲ್ಲ ಶಿಷ್ಯ ಆನಂದನೆ 
ವಿಷವಿಟ್ಟನಲ್ಲಾ.

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...