Saturday, December 3, 2022

ತನಗಗಳು

ರವಿವಾರದ ತನಗಗಳು

ಮಂದಹಾಸವ ಬೀರಿ 
ಹಂದರದಲ್ಲಿ ಕಟ್ಟಿದೆ
ತಾಳಿಕೊಳ್ಳಲು ತಾಳಿ
ಇವಳು ಬಿರುಗಾಳಿ.

ಸಂಸಾರ ಅದ್ಹೇಗೆ 
ಆಗುತ್ತದೆ ಸಸಾರ 
ಬಾಗಿದವನ ಮೇಲೆ
ಸದಾ ಇರುತ್ತೆ ಬಾರ.

ಹುಡುಗಿಯಾ ಅಲ್ಲಲ್ಲ
ಇವಳು ತುಡುಗಿಯೇ
ಕದ್ದಳು ಕಾಪಿಟ್ಟಿದ್ದ
ಮುತ್ತಿನಂತ ಹೃದಯ.

ಮಂಚದ ಮೇಲೆ ಲಂಚ
ಎಚ್ಚರ ಬೇಕು ಕೊಂಚ 
ಅದಲ್ಲ ನಿನಗೆ ಲಂಚ್ 
ನಿನ್ನ ಮುಗಿಸೊ ಸಂಚು.

ಬಸನಗೌಡ ಗೌಡರ

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...