Friday, July 14, 2023

* ಅಂಕಗಳ ಭೂತ *

ನಮಗೀಗ ಹಿಡದಿದೆ ಅಂಕಗಳ ಭೂತ
ಅಮ್ಮನಿಗೆ ನಂಟು, ಅಪ್ಪನಿಗೂ ಉಂಟು।
ಗುರುವಿಗೂ ತಂದು ಹಾಕಿದರು ಗಂಟು ಹಾಕಿಕೊಳ್ಳದಿದ್ದರೆ ಕೇಳುವರು ನೂರೆಂಟು॥

ಗುರು ಮಾಡಿಸಬೇಕು ಬಾಯಿಪಾಠ
ಮಾಡಿಸದಿದ್ದರೆ ಎಲ್ಲರದೂ ಕಾಟ।
ಮಾಡಿದರೆ ಹುಡುಗರು ಕಂಠಪಾಠ
ನೆನಪಿಡಲು ನಡೆಯುವದು ಪಿಕಲಾಟ॥

ಆಟದಲ್ಲಿಯೂ ಇರುವುದು ಪಾಠ
ಪಾಠ ಮಾಡಿದರಾಗಬಾರದು ಕಾಟ।
ಪಾಠವೇ ಆಗಿರಬೇಕು ಆಟ
ಕನಸು ಕಟ್ಟಲು ಬೇಕು ಪಠ್ಯೇತರ ಓಟ ॥

ಅಂಕವೆ ಶ್ರೇಷ್ಠವೆಂಬ ಭೂತ ಮಿತ್ಯ॥
ಕಲಿಯಬೇಕು ಚಿತ್ರಕಲೆ, ಸಂಗೀತ ನೃತ್ಯ
ಅವುಗಳಿಂದರಳುವದು ವ್ಯಕ್ತಿತ್ವ ಸತ್ಯ।
ನೀನಾಗವೆ ಬದುಕಲ್ಲಿ ಅಭಿನೇತ್ರಿ ನಿತ್ಯ

ಗಟ್ಟಿಯಾಗುವುದು ದೇಹ
ಬಲಗೊಳ್ಳುವುದು ಮನಸ್ಸು।
ಹೃದಯ ತುಂಬಿ ಭಾವ ಅಲೆಯಾಗಿ
ಕರಗಳ ಬೆರಳಿನಲ್ಲರಳುವುದು ಭವಿಷ್ಯ ॥
 

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...