Monday, July 24, 2023

* ಕೋಟೆಕಲ್ ದಿಡಗು *

ಗುಳೇದ - ಗುಡ್ಡದ ನೆತ್ತಿಯ ಮೇಲೆ
ಬಿತ್ತು ಮುತ್ತಿನ ಹನಿಯು। 
ಎತ್ತ ಸಾಗವುದು ಗೆಳೆಯ 
ಉತ್ತರಕಿಲ್ಲ ದಾರಿ ॥
ಮತ್ತೆ ತಿರುಗಿದಳು ವೈಯಾರಿ
ಪಶ್ಚಿಮ ದಿಕ್ಕಿಗೆ ತೊರೆಯಾಗಿ॥
ಗುಳೇದಗುಡ್ಡದ ಗೆಳೆಯ 
ಕೋಟಿಯ - ಕಲ್ಲಿನ ಕ್ವಾರಿ.
ಹತ್ತಿ ಇಳಿದಿದೆ ಗುಡ್ಡದ ವಾರಿ।
ಬಿತ್ತು ಲಲನೆ ಜಲಪಾತ ಹಾರಿ॥
ಹಾವಾಗಿ ಹರಿದು, ನವಿಲಾಗಿ ಕುಣಿದು
ಕವಲಾಗಿ ಸುರಿಯುತಿದೆ ದಿಡಗು।
ಕಾಣಬೇಕು ಗೆಳೆಯ, ಏನಿದರ ಬೆಡಗು ! ।
ಕಣ್ಣಿಗೆ ಹಬ್ಬ ನಡೆದವರಿಗೆ ದಿಬ್ಬಣ।
ಕಾಯ್ದವರಿಗಿಲ್ಲ ಕಾಣುವ ಭಾಗ್ಯ ॥
ಮತ್ತೆ ಕಾಣಲು ಬೀಳಬೇಕು 
ಮುತ್ತಿನ ಮಳೆಯು।
ಇವಳು ಕೋಟೆಯ "ಕಲ್ಲಿನ ರಾಣಿ"
ಗುಳೇದಗುಡ್ಡದ "ಮಹಾರಾಣಿ"।
ಬಂದಾಗ ಮಿಂದು, ಜಿಗಿದಾಗ ಕುಣಿದು
ಬೆರೆಯಬೇಕು ಗೆಳೆಯ॥






No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...