Friday, August 18, 2023

ಬೀಳ್ಕೊಡುಗೆ

ಮರೆತೆವೆಂದರೆ ಮರೆಯುವುದು 
ಹ್ಯಾಂಗ್, 
ಕೂಡಿ ದಯ ಮಾಡಿಸಿದ ಆನಂದ,
ಅದು ಕಾಲೇಜಿನ ದಯೆ.
ಕೂಡಿ ಬಂದಿತ್ತು ಮಹಾದಾನಂದ
(ದಯಾನಂದ)
ದೂರಾದರೇನು ಮರೆಯಲಾಕ
ಹಳೆಬಟ್ಟೆಯಲ್ಲ  
ಬೀಸಿ ಎಸೆಯುವಾಂಗ.
ಹಸಿಗೋಡೆಯೊಳಗಿನ 
ಹರಳು ಕಣೋ ಬೆಸದಾವು 
ಮಣ್ಣಿನೊಳಗ ಕೀಳದಂಗ,  
ಆರತವೇನು ಶೆಟ್ಟರೆ 
ಗಟ್ಟಿಯಾಗಿಯೇ 
ಉಳಿಸಿ ಬಿಟ್ಟು ಹೋದಿರಪಾ 
ಎಲ್ಲರೂ ಇಲ್ಲದಾಗ  
ತಟ್ಟತಾವೂ ಎದೆಯೊಳಗ  
ಒಂದಾ ಎರಡಾ ವಿಡಿಯೋ 
ಕಟ್ಟಿ ಬಿಡತಿದ್ದಿರಲ್ಲ ನೂರಾ ಒಂದಾ.  
ಅವು ರೀಲ್ ಅಲ್ಲ 
ರಿಯಲ್ ಮೆಮೋರಿ, 
ಕಚಗುಳಿ ಇಡತಾವ್. 
ಹಂಚಗೊಂಡು ತಿನ್ನುವಾಂಗ 
ಒಂಚೂರು ಬ್ಯಾಸರಿಲ್ಲ 
ದಿನಾ ತಿಂತಿವಿ 
ಚೋಡಾ ಚಪ್ಪರಿಸಿದಂಗ. 




.

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...