* ಇಮ್ಮಡಿ ಪುಲಕೇಶಿ *
ವಾತಾಪಿ ಪುರದ ಅಧಿಪತಿಗೆ
ಕಾಕಾ ಮಂಗಳೇಶನೆ ಕಂಟಕ।
ನೆರೆಹೊರೆಯ ರಾಜರೇ ನೆಂಟರಿವನಿಗೆ।
ನಡೆಯಿತು ಯುದ್ಧ ಏಳುಪಟ್ಟುಸಿಂಬಿಗೆ
ಹತನಾದ ಮಂಗಳೇಶ,ಪುಲಿಕೇಶಿ ಏರಿದ ಪಟ್ಟ॥
ಅಂತಃಕಲಹದ ಲಾಭ ಪಡೆದರು
ರಾಷ್ಟ್ರಕೂಟ ಅಪ್ಪಾಯಿಕಾ ಗೋವಿಂದ ,
ಅಲುಗಾಡಿತು ವಾತಾಪಿ ನೆಲ।
ಪುಲಿಕೇಶಿಯ ಘರ್ಜನೆಗೆ ಅಪ್ಪಾಯಿಕ ಪರಾರಿ ಗೋವಿಂದ ಶರಣಾಗತಿ, ಭೀಮಾ ತೀರ ನೀಡಿತು. ಪುಲಿಕೇಶಿಗೆ ಜಯಭೇರಿ ॥
ಕದಂಬ, ಕೊಂಕಣ ಮಲೆನಾಡು,
ಅಲುಪರ ಕಡಲು,ಗಂಗರ ತಲಕಾಡು
ವಶವಾಯಿತು ಕುಂತಲ ನಾಡು।
ವಿಂಧ್ಯಯ ಕಡೆ ಇಮ್ಮಡಿ ಪುಲಕೇಶಿಯ ನಡೆ
ಲಾಟ,ಮಾಳ್ವ, ಗೂರ್ಜರ ಭರ್ಜರಿ ಬೇಟಿ
ನರ್ಮದೆಯ ನಾಡು, ಕರ್ನಾಟಕಬಲದ ಬೀಡು॥
ಆರ್ಯಾವರ್ತದ ಹರ್ಷವರ್ಧನ ದೊರೆ
ಅರಿಯಲಿಲ್ಲ ಪುಲಿಕೇಶಿಯ ಕರ್ನಾಟ ಬಲ ।
ಬಯಸಿದ ಸಂಪೂರ್ಣ ಜಂಭೂ ದ್ವೀಪ
ಕದನ ಸಾರಲು ತುಳಿದ ದಕ್ಷಿಣಾ ಪಥ ॥
ಸುಲಬವಲ್ಲವದು ಇಮ್ಮಡಿ ಪುಲಕೇಶಿಯ
ಚಾಲುಕ್ಯರ ಈ ಮಲಪ್ರಭೆಯ ಬನದ ನೆಲ
ತೋರಿಸ ಬಯಸಿದ ಹರ್ಷವರ್ಧನ ಪ್ರತಾಪ।
ಹರ್ಷ ಎಂಬ ಅರಸನ ಹರ್ಷ, ಉಡುಗಿತು.
ನೋಡಿ ಉರಳಿ ಬಿದ್ದ ಅಶ್ವಗಳ ಪ್ರಲಾಪ॥
ಮಲಪ್ರಭೆಯ ಅಲೆ ಭರತಖಂಡ ಮೀರಿ
ಪರ್ಷಿಯಾದ ಖುಸ್ರುನ ಆಸ್ಥಾನ ಸೇರಿ
ದ್ರಾವಿಡರ ಗೆಳತನಕಾಯಿತು ನಾಂದಿ।
ಅಜಂತಾ ಗುಹೆಯ ಕಲೆಗಿದು ಮೆಹಂದಿ॥
ಚಾಲುಕ್ಯರ ಕಲಿ ಈತ ಕುಶಾಗ್ರಮತಿ
ಪಲ್ಲವ ಮಹೇಂದ್ರನಿಗಾದ ಕದನ ಮೂರುತಿ
ಗೆದ್ದು ನೀಡಿದ ಗುಡಿ ಗುಂಡಾರಕೆ ದತ್ತಿ।
ಆರಲಿಲ್ಲ ದ್ವೇಷ, ಪಲ್ಲವರ ಮಗ ನರಸಿಂಹ. ಇಳಿವಯಸ್ಸಿಗೆ ತೋರಿದಿವನಿಗೆ ಬಾರವಾದ ಬುತ್ತಿ ॥
No comments:
Post a Comment