ಟ್ರಿನ್.. ಟ್ರಿನ್...ಟ್ರಿನ್..... ಹೆಲೋ ಸರ್ , ...ಯಾರದು ? "ನಾನು ರಂಗಣ್ಣ ಸರ್ " ಗೋವಾದಿಂದ ಮಾತಾಡತಾ ಇರೋದು, " ಇನ್ನೂ ಎದ್ದಿಲ್ಲವಾ ಸಾರ್ ".ಎಂದ .ರಂಗಣ್ಣನ ದ್ವನಿ ಗುರುತು ಹಿಡಿಯಲು ತಡವಾಗಲಿಲ್ಲ, ಆದರೂ ಅದಾಗಲೆ ರಂಗಣ್ಣ ತನ್ನ ಹೆಸರು ಹೇಳಿಯಾಗಿತ್ತು " ಸರ್, ಇನ್ನೂ ಮಲಗಿದ್ದೀರಾ ಎಂದ.ಹೌದಪ್ಪಾ ಲೇಟಾಗಿ ಎದ್ದೆ .ಏನ್ ಸಮಾಚಾರ ಎಲ್ಲಾ ಆರಾಮ ಇದ್ದಿಯಾ ಎಂದೆ ,ಹುಡುಗ ತಡಬಡಾಯಿಸಿ, ಸರ್, ಹ್ಯಾಪಿ ಬರ್ತ ಡೇ ಸರ್, ಎಂದ ಅವಾಗಲೆ ನನಗೆ ಅರ್ಥ ಆಗಿದ್ದು ಜೂನ ಒಂದು ನನ್ನ ಬರ್ತ್ ಡೇ ಅಂಥಾ.ಧನ್ಯವಾದಗಳು ರಂಗಣ್ಣ ಶುಭಾಶಯಗಳು ಎಂದೆ.
ಪ್ರಾಥಮಿಕ ಶಾಲೆಯ ಶಿಕ್ಷಕರು ಬರೆದ ಬ್ರಹ್ಮ ನ ಬರಹ ಆ ಹುಟ್ಟು ಹಬ್ಬದ ದಿನ ,ಅದನ್ನು ಯಾರಿಂದಲೂ ಅಳುಕಿಸಲು ಸಾಧ್ಯವಾಗದ್ದು.
ನಾವು ನಿವೃತ್ತಿ ಯಾಗಬೇಕಾದದ್ದು ಕೂಡಾ ಈ ದಿನವನ್ನೆ ಆಧಾರವಾಗಿಯೇ ಇಟ್ಟು ಕೊಂಡು, ಹಾಗಾಗಿ ಈ ಬರಹ. ಇದು ಬ್ರಹ್ಮ ಬರಹವೆ ಸರಿ.ನಮ್ಮಪ್ಪ ರೈತ ತುಂಟಾಟ ಕಡಿಮೆ ಮಾಡಿಸಲು ಸಣ್ಣ ವಯಸ್ಸಿನಲ್ಲಿ ಶಾಲೆಗೆ ನೂಕಿರಬಹುದು ಇಲ್ಲವೆ .ಸುಧಾರಿಸಿದ ಪಾಲಕರು ಹೆಚ್ಚು ವಯಸ್ಸಾದರೂ ನವೋದಯದಂತ ಶಾಲೆಗೆ ಹಾಕುವುದಕ್ಕಾಗಿ ಹೆಚ್ಚು ವಯಸ್ಸಾದರೂ ಕಡಿಮೆಯಾಗಿ ಹಚ್ಚಿರಲಿ .ಯಾವುದನ್ನೂ ಅಳುಕಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರು ಬ್ರಹ್ಮರೆ.!
ನನ್ನ ಹಾಗೂ ರಂಗಣ್ಣನ ಪ್ರೀತಿಯ ಕುಶಲೋಪರಿ ಇಂದು ನಿನ್ನೆಯದಲ್ಲ ಆತ ಪ್ರೈವೇಟ ಕಂಪನಿಯಲ್ಲಿ ಉದ್ಯೋಗ ಹಿಡಿದಾಗಿನಿಂದ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಲೆ ಇದ್ದಾನೆ .ಆದರೆ ನನ್ನ ಹಾಳಾದ ನೆನಪು ನನಗೆ ಕೈ ಕೊಡುತ್ತಿದೆ.ಆತ ವಿದ್ಯಾರ್ಥಿ ದೆಶೆಯಿಂದನೂ ನನಗೆ ಅಚ್ಚುಮೆಚ್ಚು ಆದರೆ ನನಗಿಂತ ನನ್ನ ಇಂಗ್ಲೀಷ್ ಉಪನ್ಯಾಸಕರಾದ ಬಿರಾದಾರ ಸರ್ ಜೊತೆ ಅವನ ನಗುವಿನ ಚಟಾಕೆ ಬಹಳ ಇರುತ್ತಿತ್ತು ನಾನಾದರು ನಕ್ಕು ನಕ್ಕು ಸುಸ್ತಾಗುತ್ತಿದ್ದೆ ಕಲಿಯುವಿಕೆಯಲ್ಲಿ ಆತ ಸಾಧಾರಣವಾದ ವಿದ್ಯಾರ್ಥಿಯಾದರೂ ಉಪನ್ಯಾಸಕರ ಜೊತೆಗೆ ಆತನ ಸಂಪರ್ಕ ಬಹಳ ಚನ್ನಾಗಿಯೇ ಇತ್ತು ಮತ್ತು ಆತ ನಮ್ಮೂರ ವಿದ್ಯಾರ್ಥಿ ಎನ್ನುವುದು ನನ್ನನ್ನು ಇನ್ನಷ್ಟು ಆತನ ಹತ್ತಿರಕ್ಕೆ ತಂದಿತ್ತು.
ನಮ್ಮ ಇಂಗ್ಲಿಷ್ ಉಪನ್ಯಾಸಕರಾದ ಎಸ್ ಸಿ ಬಿರಾದಾರ ಹೆಚ್ಚು ಲೋಕ ಜ್ಞಾನ ಹೊಂದಿದ ವ್ಯಕ್ತಿ ಆವರು ಜಾಣ ವಿದ್ಯಾರ್ಥಿಗಳಿಗಿಂತ ಸಾಧಾರಣವಾದ ಮತ್ತು ದಡ್ಡ ವಿದ್ಯಾರ್ಥಿಗಳನ್ನು ಬಹು ಹೆಚ್ಚಾಗಿ ಪ್ರೀತಿಸುತ್ತಿದ್ದರು ಇದಕ್ಕೆ ಅವರು ಕೊಡುವ ಕಾರಣ ಬಹು ಮಾರ್ಮಿಕವಾಗಿತ್ತು ,ಸರ್ ನಾವು ಸತ್ತಾಗ ಪ್ರೀತಿಯಿಂದ ಎತ್ತಿಕೊಂಡು ಹೋಗುವವರೆ ಇವರು ನಾವು ಮುದುಕರಾದಾಗ ಕೈ ಮುಗಿದು ಬಸ್ ನಲ್ಲಿ ಸೀಟು ಬಿಟ್ಟು ಕೊಡುವವರು ಇವರೇ ಆದರೆ ನೀವು ಜಾಣರು ಅಂತಾ ಅತ್ಯಂತ ಹೆಮ್ಮೆಯಿಂದ ಹೇಳುತ್ತಾ ತಿರುಗುತ್ತೀರಲ್ಲ ಅವರಾರು ಇವರಷ್ಟು ನಮ್ಮ ಇಳಿಗಾಲದಲ್ಲಿ ಸಮೀಪದಲ್ಲಿ ಬರುವವರಲ್ಲ ದೂರದಲ್ಲಿಯೇ ನೋಡಿ ಮಾತನಾಡಿಸುವದು ಬರುತ್ತೆ ಅಂತಾ ದಾರಿ ಬದಲು ಮಾಡುವವರೆ ! ಎಂದಿದ್ದರು. ಬಹುಶಃ ಇವತ್ತು ನಸುಕಿನಲ್ಲಿ ಎಚ್ಚರಿಸಿದ ರಂಗಣ್ಣನ ಶುಭಾಶಯ ಬಿರಾದಾರ ಉಪನ್ಯಾಸಕರನ್ನು ನೆನಪು ಮಾಡುವಂತೆ ಮಾಡಿತು.
ಇರಲಿ ಈ ನನ್ನ ವಿದ್ಯಾರ್ಥಿ ರಂಗಣ್ಣನನ್ನು ಸಾಧಾರಣವಾದ ವಿದ್ಯಾರ್ಥಿ ಎಂದೆನಲ್ಲವೆ ? ಈಗ ನನ್ನ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುವ ಸರದಿ .ಏಕೆಂದರೆ ನನಗೊಬ್ಬ ಮಗನಿದ್ದಾನೆ ಆತನಿಗೆ ಪಿ ಯು ಸಿ ಗೆ ಪ್ರತಿ ಒಂದು ವರ್ಷಕ್ಕೆ ಒಂದು ಲಕ್ಷ. ಎರಡನೇ ವರ್ಷಕ್ಕೆ ಮತ್ತೊಂದು ಲಕ್ಷ ಇನ್ನೂ ಇಂಜಿನಿಯರಿಂಗ್ ಮುಗಿಸಲು ನಾಲ್ಕು ಲಕ್ಷ. ಎಮ್ ಟೆಕ್ ಮಾಡಲು ಎರಡು ವರ್ಷಕ್ಕೆ ಎರಡು ಲಕ್ಷ ಒಟ್ಟು ಎಂಟು ಲಕ್ಷ ಖರ್ಚು ಮಾಡಿದ್ದೇನೆ ಪ್ರತಿ ವರ್ಷವೂ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾನೆ ಇಂಜಿನಿಯರಿಂಗ್ ಓದುವಾಗ ಎರಡು ವರ್ಷ ಕಾಲೇಜಿಗೂ ಪ್ರಥಮ ಬಂದಿದ್ದಾನೆ ಈಗ ವಿಶ್ವ ವಿದ್ಯಾಲಯದಲ್ಲಿ ಹೊರಗುತ್ತಿಗೆ ಮೇಲೆ ತಿಂಗಳಿಗೆ ಮೂವತ್ತು ಸಾವಿರ ಸಂಬಳವನ್ನೂ ಪಡೆಯುತ್ತಿದ್ದಾನೆ.ಪ್ರಶ್ನೆ ಅದಲ್ಲ ಹೊಲಿಕೆಗೆ ಹೇಳುತ್ತಿದ್ದೇನೆ ಅಷ್ಟೇ.ನನ್ನ ವಿದ್ಯಾರ್ಥಿ ರಂಗಣ್ಣನೂ ಇಪ್ಪತೈದು ಸಾವಿರ ಸಂಬಳವನ್ನು ಪಡೆಯುತ್ತಿದ್ದಾನೆ. ಹಾಗಾದರೆ ಯಾರು ಸುಖಿಗಳು ? ಅವನು (ರಂಗಣ್ಣ) ಯಾವತ್ತೂ ಸಪ್ಪೆ ಮುಖ ಮಾಡಿ ಮಾತಾಡಿದ್ದೆ ನೋಡಿಲ್ಲ ಅತ್ಯಂತ ಸುಂದರವಾದ ಕುಟುಂಬವನ್ನು ನಡೆಸುತ್ತಿದ್ದಾನೆ.ಹಾಗಾದರೆ ಅತ್ಯಂತ ಉನ್ನತ ಮಟ್ಟದ ಶಿಕ್ಷಣ ಪಡೆದವರೆ ಹೆಚ್ಚು ಸುಖವಾಗಿರುತ್ತಾರೆ ಎನ್ನುವುದು ತಪ್ಪಾದೀತು .ಇದರರ್ಥ ಇಂಜಿನಿಯರಿಂಗ್ ಕಲಿತವರು ಸುಖಿಗಳಲ್ಲ ಎನ್ನುವುದು ನನ್ನ ವಾದವಲ್ಲ ಅದಕ್ಕೆ ತನ್ನದೇ ವ್ಯಾಪ್ತಿ ಇದೆ, ಆ ಮಾತು ಬೇರೆ.ಸುಮಾರು ವರ್ಷಗಳ ಹಿಂದೆ ಹಾಸ್ಟೆಲ್ ನಲ್ಲಿ ಅಡುಗೆಯವರ ಹುದ್ದೆಗೆ. ಅರ್ಜಿ ಕರೆಯಲಾಗಿತ್ತು ಅದಕ್ಕೆ ಎಮ್ ಟೆಕ್ ಆದವರು ಅರ್ಜಿ ಸಲ್ಲಿಸಿದ್ದರು ಕೆಲವರು ಆಯ್ಕೆ ಆಗಿರಲೂಬಹುದು ಅಡುಗೆ ಮಾಡುವ ಹುದ್ದೆ ಹಿಡಿಯಲು ಎಮ್ ಟೆಕ್ ಓದಬೇಕಾಗಿತ್ತೆ ?...... ಪ್ರಶ್ನೆ ಅದಲ್ಲ ತಾವು ಓದುವ ಬ್ರ್ಯಾಂಚನಲ್ಲಿ ಪಡೆಯಬೇಕಾದ ಕೌಶಲ್ಯ, ತಾಂತ್ರಿಕತೆ ಮತ್ತು ಬದ್ದತೆಯನ್ನು ಪಡೆಯದ ಕಾರಣಕ್ಕೆ ಈ ಎಲ್ಲಾ ಅವಾಂತರಕ್ಕೆ ಕಾರಣವಾಗುತ್ತದೆ ಎನ್ನುವುದು ಅಷ್ಟೇ ಸತ್ಯ .ಇರಲಿ ರಂಗಣ್ಣನ ಶುಭಾಶಯಗಳು ನನ್ನನ್ನು ಇಲ್ಲಿಗ ತಂದು ನಿಲ್ಲಿಸಿತು .ರಂಗಣ್ಣ ನಿನಗೂ ಮತ್ತು ನನ್ನಂತೆ ಜೂನ್ ಒಂದು ಹುಟ್ಟು ಹಬ್ಬದ ದಿನಾಚರಣೆ ಆಚರಿಸಿಕೊಳ್ಳುತ್ತಿರವ ಎಲ್ಲಾ ನನ್ನ ಬಂಧುಗಳಿಗೆ ಮತ್ತೊಮ್ಮೆ ಹಾರ್ದಿಕ ಶುಭಾಶಯಗಳು.🙏🙏🙏🙏🙏🌷🌷🌷🌷🌷🙏🙏
No comments:
Post a Comment