Wednesday, July 17, 2024

* ನಮ್ಮೂರ ಮೊಹರಂ *




ಭಾವೈಕ್ಯ ದ ಹಬ್ಬದಲ್ಲಿ ತೇಲುವ
ಭಾವ ಜೀವಿಗಳ ಊರಲ್ಲೊಂದು ದಿನ
ಭರವಸೆಯು ಅನುದಿನ, ಅದು ನನ್ನೂರ ಜನ
ಬೆರೆತು ನೀಡಿತು ಪ್ರೀತಿಯ ಮಧುಬನ ॥

ಬೆರೆಸಲು ಸಾಧ್ಯವೆ ಮೇಲು ಕೀಳೆಂಬ
ಹೊರೆಯಾದ ಕಿರು ಹಳಸಲು ಸಾಲುಗಳ
ಬರಿ ಭರವಸೆಯೊಂದಿದೆ ಅದು ಅಲೆ ದೇವರಾ
ವರ ನಮಗೆ, ಯುವ ಜನರ ಹೆಜ್ಜೆಯ ಸಾಲುಗಳು॥

ಡೋಲಿ ಡಮರುಗ, ಮುಂದೆ ಹಲಗಿಯ ಮೇಳ
ಕೋಲು ಬೀಸಿ ಕುಣಿಯುವ ಯುವ ದಳ
ಸಾಲು ನೋಡುವುದೆ ಭರವಸೆಯ ಹವಳ
ಹುಲಿ ವೇಷದಾರಿಗಳೆ ನಮ್ಮ ಕುಷಿಯ ಕವಳ॥

ಜಾತಿಗಳು ಹೂತು ಹೋಗಿವೆ ಇಲ್ಲಿ
ಮತಿ ಮೇಲುಗೈ ಸಾಧಿಸಿದೆ ಮನೆ ಮನಗಳಲ್ಲಿ 
ಪಥ ಒಂದೇ ಸಹೋದರತೆಯು 
ನೀತಿಯೊಂದು, ಬೆರೆತು ಬಾಳಿದರೆ ಸ್ವರ್ಗ ಸುಖ॥

ಬೆಂಕಿಯು ಭರವಸೆಯೇ, ಕೋಲ್ಮಿಂಚು! 
ಬಿಂಕವಾ ಕರಗಿಸಿ ಸಂಕೀರ್ಣ ತೊಲಗಿಸಿ 
ಸಂಗೀತ ದಂತ ಆಲಾಪ. ಗಂಧರ್ವ ಲೋಕ ಜಗವೆಲ್ಲ
ತುಂಬುವುದು ಊರೆಲ್ಲಾ ಆಲಾಪವೂ:

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...