Monday, October 7, 2024

ಹತಭಾಗ್ಯರು

ಸತ್ಯವರಿಯದೆ ನಿತ್ಯ ತಿರುಗುವ
ಬೆತ್ತಲೆಯ ಜಗದ ಹತಬಾಗ್ಯರು
ಗೊತ್ತು ಮಾಡಿಕೊಳ್ಳುವ ಕಾಲವಿದು 
ಬಿತ್ತಬೇಕು ಸುಜ್ಞಾನದ ಬೀಜ ಮನದೊಳು॥

ಗೌರವ ಬೇಡಿ ಪಡೆಯುವ ಸರಕಲ್ಲ
ದೊರಕುವಂತೆ ನಡೆಯಬೇಕು ಅನುದಿನ 
ಹರಕು ಮಾತಿನಿಂದ ದೊರಕದು ಸಿರಿತನ
ಹೊರೆಯಾಗದ ಬದುಕಿರಲಿ ಜಗದೊಳು॥

ಉಚ್ಚ ನೀಚ ಬಚ್ಚಲಿನ ಬಾಳು
ನೆಚ್ಚಿ ಬದುಕುವ ಜನರಿಂದಿರು ದೂರ
ಸ್ವಚ್ಛ ಜನರೆ ಹಾರ, ಬಿಚ್ಚಿ ನಡೆಯಬೇಕು
ಕಚ್ಚುವ ತಿಗಣಿಗಳುಂಟು ಜಲದೊಳು॥

ಗತವರಿಯುವ ಸುತರು ಮಿತಿಯಲಿರಲು
ಮತಿಯ ನೆರಳು ಮೀರಿ ನಡೆಯಲಾಗದು
ಕಥನ ಬರೆಯುವ ಹಿತ ಶತ್ರುಗಳಿಹರು
ಜೊತೆ ನಡೆದರೆ ಘಾತ ಕೊನೆಯೊಳು॥

ಕಟ್ಟು ಕಥೆ ಇಟ್ಟು ವಾದದಲ್ಲಿವರ ಪಟ್ಟು
ಬಿಟ್ಟು ಸಾಗದಿರು ಇತಿಹಾಸದ ಗುಟ್ಟು
ಒಟ್ಟುಗೂಡಿ ಹೋಗೋಣವೆಂದವನ
ಹೆಣ ಸಾಗುವುದು ನಾಮದ ಮಸಣದೊಳು॥



No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...