Saturday, November 9, 2024

ಕಲಿಸುವವನ ಗೋಳು

ಹಸಿಯದ ಹಸುಳೆಗೂ ಹಾಲುಣಿಸುವ
ಹತಬಾಗ್ಯ ಹಸುಗಳು ನಾವೆಲ್ಲ ।
ಕುಸಿಯುತಿವೆ ಕೌಟುಂಬಿಕ ಕಂಬಗಳು
ಬೆಸೆಯುವ ಬಗೆ ಒಂದೇ ಸಹನೆಯಿಂದ॥

ಬೀದಿಬದಿಯ ಅಂಗಡಿ ಜಾದುವಿಗೆ
ಪೀದಾ ಆಗುವವರು ನೀವೆಲ್ಲಾ!
ಸತತ ಪಾಯಸ ನೀಡುವ ನಮಗೆ 
ಕುಹಕದ ಮಾತುಗಳು ತಪ್ಪಿಲ್ಲ॥

ಸಮಾಜ ಕಟ್ಟುವ ಕರ್ಮಿಗಳ
ನಮಾಜ್ ಒಂದೇ ದಾರಿ ಬಿಡಿ।
ಕಲಿಸುವ ಮನಗಳಿಗೆ ಸ್ವಾತಂತ್ರ್ಯ ಕೊಡಿ
ಕಲಿಸದೆ ನಟಿಸಿದರೆ ಗೋಲಿ ಹೊಡಿ ॥

ಜೊತೆಯಾಗಿ ನಡೆಯುವ ಮನಸ್ಸಿದೆ 
ಹಿತವಾಗಿ ನೀಡುವ ಹಾರೈಕೆ ಯಾಕಿಲ್ಲ ।
ಮಿನುಗುವ ಬಂಗಾರ ಒಂದೆ ಆಸ್ತಿ ಅಲ್ಲ 
ನೀವಿಟ್ಟಿರುವ ವಂಶ ದೀಪಾನೆ ಎಲ್ಲಾ॥

ಭತ್ತ ಬೆಳೆಯಲು ಭತ್ತದ ಬೀಜವೆ ಬೇಕು
ಕಬ್ಬಿನ ಬೆಳೆಗೆ ಯಾಕೆ ಹಪಹಪಿಸಬೇಕು ।
ನಾವು ನೀರು ಬಿಡುವವರು ಮಾತ್ರ 
ಬೇವು ಬೆಳೆದರೆ ನಾವೇ ಹೊಣೆಯಾಗಬೇಕು॥





No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...