Sunday, April 5, 2020

ದೀಪದಿಂದ ನಿಜ ದೀಪಾವಳಿ
______________________

ದೀಪದಿಂದ ಕೊರೊನಾ ದಿವಾಳಿ
ದಿಪದಿಂದ ಶಾಪ ದಿವಾಳಿ
ಲೋಕದ ತಮಂದ ದಿವಾಳಿ
ಆಚರಿಸುವೆವು ನಮ್ಮ ನಿಜ ದೀಪಾವಳಿ//

ಆರಿಸಿ ಆಚರಣೆ ನಮ್ಮದಲ್ಲ ಕೇಳಿ
ಎಚ್ಚರದಿಂದ ಹಚ್ಚಿ ದೀಪ,ತಾಳಿ
ಹುಚ್ಚರಾಗಿವಿ ಕೊರೊನಾ ಕೇಳಿ ಕೇಳಿ
ಅಚ್ಚರಿಯ ಫಲಿತಾಂಶ ಕೇಳಿ
ಆಚರಿಸುವೆವು ನಮ್ಮ ನಿಜ ದೀಪಾವಳಿ//

ದೀಪ ಒಂದು ಕ್ಷಣಿಕ
ಭಾವ ಬಿತ್ತ ಬೇಕು ಜನಕ
ಭವ್ಯ ಭಾರತ ಕಟ್ಟಬೇಕು
ಕಾಶ್ಮೀರ, ಕನ್ಯಾಕುಮಾರಿ ತನಕ
ಆಚರಿಸುವೆವು ನಮ್ಮ ನಿಜ ದೀಪಾವಳಿ//

ಭವ್ಯ ಪರಂಪರೆ ಪುತ್ರರು
ಭುವನ ಮಾನವ ಮಿತ್ರರು
ಭೇಧ ಭಾವ ಅಳಿಯಲು
ರೋಗ ರುಜಿನ  ತುಳಿಯಲು
ಆಚರಿಸುವೆವು ನಿಜ ದೀಪಾವಳಿ//

ದಾದಿ ವೈದ್ಯ ಸ್ಮ ರಣೆ ಗಾಗಿ
ಮೋದಿಪ್ರಧಾನಿಯ ಕರೆಗಾಗಿ
ನೂರಾ ಮೂವತ್ತೆಳು  ಕೋಟಿ
ಜನರಿಗಾಗಿ ದೀಪದಿಂದ
ಆಚರಿಸುವೆವು ನಿಜ ದೀಪಾವಳಿ//


             ಬಸನಗೌಡ ಗೌಡರ

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...