Sunday, August 23, 2026

ವಿಷಕಾರಿ

ವಿಷಯದ ನಶೆ ಏರಿ ವಿಷವಾಗುತಿದೆ
ಬೀಸಿ ರಕ್ತದ ಯುವಕರ ರೀಲಗಳ ಮನ
ತುಸು ವಿರಮಿಸದೆ ಹೊಸೆಯುತಿಹರು
ಕಿಸೆ ತುಂಬಿದ ನಿತ್ಯ ಮೊಬೈಲ್ ವೀರರು

ಕಸ ಕಡ್ಡಿ ಸುರವಿ ತುಸು ನೀರು ಚೆಲ್ಲಿ 
ಹೊಸ ಗೊಬ್ಬರ ಪಡೆಯಬಹುದೇನು ಇಲ್ಲಿ  
ಅಲ್ಲವಿದು ರೈತನ ತಿಪ್ಪೆಯಗುಂಡಿಯ ತಾನ
ಬೆಸೆಯಬೇಕು ಮನ ಪ್ರೀತಿಯ ಭಾವ 

ಹಾದಿ ಬೀದಿಗಳಲ್ಲಿ ಸಂಗತಿಯ ಶೋಧ
ಬೇಕಿವರಿಗೆ ಓದದೆ ಉದ್ಯೋಗ,ಬರೆಯದೆ ಅಂಕ
ಹೊರೆಯಾಗುತ್ತಿದೆ ಗುರುವೆಂದವನ ಬಾರ 
ಹಾತೊರೆಯುತಿದೆ ಅರಿತವನ ಮನ

ಅಂಕೆಯೊಳಗಿಡದೆ ಬಿಂಕದಿ ನಡೆದರೆ
ಸಂಕಟ ಪಡುವರು ಯಾರು ಅನುದಿನ
ತಪ್ಪು ನಡೆಯುವಾಗ ಒಪ್ಪಿ ನಡೆಯುವುದೇನು 
ತಪ್ಪಿದರೆ ಬೆಪ್ಪ... ನಾ ಗುರುವಿಗೆಲ್ಲಿದೆ ಮಾನ





 
 










ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...