ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುವಾಗ
ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ
ಬಿಟ್ಟಿರಲಾಗದು ಸೋಕಿಯ ಚೌಕಟ್ಟೆನೊಳಗೆ
ಚಿನ್ನಿ ದಾಂಡು ಚೆನ್ನಾಗಿತ್ತು ಹಳ್ಳಿಯೊಳಗೆ
ಕಣ್ಣಸನ್ನೆ ಮಾಡಿದರೆ ಸಾಕು ನೂರು ಹುಡುಗರು
ಕುಣಿದು ಕುಪ್ಪಳಿಸಲೇನು ಬರ ನಮ್ಮೂರಿನೊಳಗೆ.
ಬಿದ್ದಿರುವೆ ಮೊಬೈಲ್ ಮರಕೋತಿಯಾಟದೊಳಗೆ
ನಗರ ಸೇರಿ ಹಗುರು ಹಾರುವ ಕನಸು ಕಂಡೆ
ಹಗರು ಮಾಡಲಲ್ಲವೆ ನಗರ ಸಂಸ್ಕೃತಿಯ ಕೆಂಡ
ಉಡಲಿನಲ್ಲಿಡೆ ಸುಡದೆ ಬಿಡುವುದೇನಿದು ಪಿಂಡ
ಕಡೆಗೆ ಹಳ್ಳಿಯ ನಡೆಯೇ ಸ್ವರ್ಗ ಭುವಿಯೊಳಗೆ
ತಂತ್ರಜ್ಞಾನ ವೊಂದೆ ಪರಮವಿಲ್ಲಿ
ಯಂತ್ರಗಳು ನಡೆಸುವವು ಬದುಕನೆಲ್ಲಾ
ಕುಳಿತರೆ ಕುತಂತ್ರ ಸಾಗುವವು ಇದರೊಳಗೆ
ಮರೆತರೆ ಉಳಿಯಬೇಕು ಭೂತದ ಭಾವಿಯೊಳಗೆ
No comments:
Post a Comment