ವಿಷಯದ ನಶೆ ಏರಿ ವಿಷವಾಗುತಿದೆ
ಬೀಸಿ ರಕ್ತದ ಯುವಕರ ರೀಲಗಳಿಂದ ಮನ
ತುಸು ವಿರಮಿಸದೆ ಹೊಸೆಯುತಿಹರು
ಕಿಸೆ ತುಂಬಿ ನಿತ್ಯ ಹೊಸ ಮೊಬೈಲ್ ಜೀವನ
ಕಸ ಕಡ್ಡಿ ಸುರವಿ ತುಸು ನೀರು ಚೆಲ್ಲಿ
ಹೊಸ ಗೊಬ್ಬರ ಪಡೆಯಬಹುದೇನು ಇಲ್ಲಿ
ಅಲ್ಲವಿದು ರೈತನ ತಿಪ್ಪೆಯಗುಂಡಿಯ ತಾನ
ಬೆಸೆಯಬೇಕು ಮನ ಪ್ರೀತಿಯ ಉದ್ಯಾನ
ಹಾದಿ ಬೀದಿಗಳಲ್ಲಿ ಸಂಗತಿಯ ಶೋಧ
ಬೇಕಿವರಿಗೆ ಓದದೆ ಉದ್ಯೋಗ,ಬರೆಯದೆ ಅಂಕ
ಹೊರೆಯಾಗುತ್ತಿದೆ ಗುರುವೆಂದವನ ಬಾರ
ಹಾತೊರೆಯುತಿದೆ ದಿನ ಅರಿತವನ ಮನ
ಅಂಕೆಯೊಳಗಿಡದೆ ಬಿಂಕದಿ ನಡೆದರೆ
ಸಂಕಟ ಪಡುವರು ಯಾರು ಅನುದಿನ
ತಪ್ಪು ನಡೆಯುವಾಗ ಒಪ್ಪಿ ನಡೆಯುವುದೇ?
ತಪ್ಪಿದರೆ ಬೆಪ್ಪ... ನಾ ಗುರುವಿಗೆಲ್ಲಿದೆ ಮಾನ
ಮೋಬೈಲ್ ಗೀಳಿಗಿಳಿದು ಮಲೀನವಾಗುತ್ತಿದೆ
ಮಂಥನ ಮಾಡದ
ಯುವಕರ ಕಥನ.
ಸಂತೆಯಾಗುತಿದೆ ಸಂಗತಿಯರಿಯದ
ಸಂತೋಷದ ಜೀವನ.
No comments:
Post a Comment