Wednesday, April 15, 2020

ಹಸಿವು

ಹಸಿವು

ಹಸಿವು ಕಲಿಸಿದ  ಪಾಠ
ಭಾವ ಕಲಿಸಿದ  ನೋಟ
ಭವದಲ್ಲಿದರ ಸಮಾನರುಂಟೆ
ಭಾವದ ಮೂಲ ಇದರಲ್ಲಿಂಟು   //

ಹಸಿವಲ್ಲವೆ ಹರದಾರಿ ನೆಡೆಸಿದ್ದು.
ಹರಸಾಹಸ ಮಾಡಿಸಿದ್ದು
ಹಮ್ಮು ಬಿಮ್ಮು ಜಾರಿಸಿದ್ದು
ಒಮ್ಮೊಮ್ಮೆ ದೈನೆಸಿಯಾಗಿಸಿದ್ದು  //

ಹಸಿವಿನಲಿ ಹಲವು ವಿಧ
ಒಬ್ಬರಿಗೆ ಅನ್ನದ ಹಸಿವು
ಇನ್ನೊಬ್ಬನಿಗೆ ಜ್ಞಾನದ ಹಸಿವು
ಮಗದೊಬ್ಬಗೆ ಬೋಗದ ಹಸಿವು//

ಹಸಿವಲ್ಲವೆ ಹೊಸ ಸಂಶೋಧನೆ
ಹೊಸ ಆವಿಷ್ಕಾರದ ದಾರಿ
ಹಸಿವೆ ಕಾಣದ ಮನುಷ್ಯನುಂಟೆ
ಹಸಿವೆ ಸಕಲ ಜಂಗಮ ಪ್ರಾಣಿಗೆ //

ಬಡವನಿಗೆ ಹೊಟ್ಟೆ ಹೊರೆಯುವ
ತನ್ನವರ ತಣಿಸುವ ಹಸಿವು
ಬಲ್ಲಿದವನಿಗೆ ಹೊಟ್ಟೆ ಬಾರ
ಇಳಿಸುವ ತನ್ನವರ ಮೆರೆಸುವ ಹಸಿವು //


                ಬಸನಗೌಡ ಗೌಡರ

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...