Tuesday, April 28, 2020

ಬದುಕು ವಿಶ್ಮಯ

ಬದುಕು ಒಂದು ಪ್ರಶ್ನೆಯ ಕಟ್ಟು
ಇಲ್ಲಿ ಬಂದವರೆಷ್ಟು ಹೋದವರೆಷ್ಟು
ಲೆಕ್ಕವಿಟ್ಟ ವರಾರು ಆ ಸಾಲುಪಟ್ಟಿ
ಜಗದ ಹುಟ್ಟನು ರಟ್ಟು ಮಾಡಲು
ಹೊರಟು ಮಾಡಿ ಕೊಂಡರೆಡವಟ್ಟು //

ಜಗದ ನಿಯಮಿ ಮೀರಿ ತಾನೆ
ಏನು ಮಾಡಲಾಗದು, ಆಡಿಸಿದಂತೆ
ಆಡಬೇಕು ಅಲುಗಾಡದೆ ಸುಮ್ಮನೆ
ಜಾಣರಂತೆ ಬರೆದ ನಿಯಮವೆಲ್ಲ
ಬಾಗದೆ ತಾಳೆಯಾಗದು ಇಲ್ಲಿ //

ಜನರು ತಿಳಿದ ಹಾಗೆ ಜನನ
ಮರಣ ಸಹಜ ನಿತ್ಯಪ್ರಕರಣ
ಸಹಜವೆಂದ ಮೇಲೆ ಯಾಕೆ ರಣ
ಸತತ ಸವಿಯಬೇಕು ಜೀವನ
ಸಮನ್ವಯ ಸಾಧಿಸದಿರೆ ಹರಣ   //

ಲೋಕನಾಯಕ  ತಿರುಗಿಸಿದಂತೆ
ತಿರುಗುವ ಖಾಲಿ ಗೊಂಬೆಗಳು
ಕಾಲ ಮುಗಿದ ಮೇಲೆ ದಾರ
ಹರಿದು ಎಲ್ಲಾ ಹರ ಹರ,ಬದುಕು
ಸವಿಯಬೇಕು ಇಲ್ಲಿ ಪ್ರಶ್ನೆ ಮಾಡದೆ //

                       ಬಸನಗೌಡ ಗೌಡರ

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...