Sunday, May 10, 2020

* ಬದುಕು ಭ್ರಮೆ *

ನಾನು ನನ್ನದೆಂಬ ಮಮಕಾರವೇಕೆ
ಬಯಕೆಯ, ಭ್ರಮೆಬದುಕು ನೂಕು
ಜೆಡ ಬಲೆ ನೇಯ್ದು ಕೊನೆ ಹಾಡಿದಂತೆ
ಬಾಳೆಲ್ಲ ಬವಣೆ ಬದುಕುವುದು ಸಾಕು //

ಗೊರಲಿ ಕಟ್ಟಿತು ಹುತ್ತ, ತಾವೊಂದು
ವಾಸಕ್ಕೆ ಬಂದು ಸೇರಿತು ಹಾವೊಂದು
ತಾನೆ ಕಟ್ಟಿದ ಮನೆ ತನಗೆ ಎರವಾಗಿತ್ತಿಂದು
ನನ್ನದೆನ್ನುವುದು ಬರಿ ಭ್ರಮೆ ಲೋಕದಲ್ಲಿಂದು

ಪಡೆದ ಜ್ಞಾನ ಅನುದಿನವು ನೆರಳಿನಂತೆ
ಎಲ್ಲೆ ಹೋದರು ವೈಭವದ ತೇರಿನಂತೆ
ಜನ ತಾವೇ ನಿಂತು ನಗುತ ಎಳೆಯತಾರ
ಹೂವು ನೀಡುತಾರ ಜೈಕಾರ ಹಾಕುತಾರ /

ಕಷ್ಟ ಸುಖಗಳು ನಾಣ್ಯದ ಎರಡು ಮುಖ
ಸಮನಾಗಿ ನಗುನಗುತ್ತ ಸ್ವೀಕರಿಸಬೇಕು
ಗೀಜಗನ ಗೂಡಿನ ಹೊದಾಣಿಕೆ ಬೇಕು
ಗಳಿಸಬೇಕು ಕಾಗೆಯಂತೆ ಹಂಚಿ ತಿನ್ನಬೇಕು //

ದೇವರು ನೀಡಿದ ಅವದಿ ಮೂರೆ ದಿನ
ಬಯಸಿ ಗಳಸಿದ ಹಚಡ ಆರು ದಿನ
ಮೀನನ್ನು ತಿಂದು ಮೀನು ಬದುಕಿದಾಂಗ
ಗೋರಿ ತೊಡುತಾರ ನನ್ನವರೆ ಜಾಣರಂಗ //


                      ಬಸನಗೌಡ ಗೌಡರ









No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...