Monday, May 11, 2020

* ಚಂಚಲೆ ಮನಸ್ಸು *

ನೀ..ಚಂಚಲೆ ತಿರುಗವೆ ಈ ಜಗವೆಲ್ಲ
ಮಾಯಾವಿ ಇಣುಕದ ಲೋಕವಿಲ್ಲ
ಹಯಕೆ ಕಡಿವಾಣ ಹಾಕಿಯೆ ಇಲ್ಲ.
ನಿನ್ನ ಸರಿಸಮವುಂಟೆ, ವೇಗದಲ್ಲಿ //

ನಿನ್ನ ಒಪ್ಪಿಗೆಯಲ್ಲಿ ನಿಂತಿದೆ ಜಗವೆಲ್ಲ.
ಹಿಟ್ಲರ್, ಮುಸೊಲಿನ್ ಟೋಜೊರೆಲ್ಲ
ನಿನ್ನಂತೆ ಅಂದು ತಲೆ ಆಡಿಸಿದರಲ್ಲ
ನೀ ಬಸ್ಮಾಸುರನ ಪಾತ್ರವಹಿಸಿದೆಯಲ್ಲ//

ನನ್ನ ಅಂತರಂಗದ ಅರಿಕೆ ನಿನಗೆ
ನಿನ್ನ ಪ್ರೀತಿಸಲು ಹರಸಾಸಪಡುವೆ
ನನ್ನ ಅಂಕೆಗೆ ಸಹಜದಲಿ ಸಿಗುವೆನಗೆ
ನೀ ವಲಿದರೆ ಗೌರವದ ಶಿಖರವೆನಗೆ //

ನಿನ್ನ ಹಿಡಿತರಲು ನನಗೆ ಗುರುಬೋಧೇ
ಧ್ಯಾನ, ದಾನಧರ್ಮ, ಯೋಗ ಮಾಡು
ನಿಷ್ಟೆಯಲಿ ಹಿಡಿದ ಕಾಯಕ ಮಾಡು
ಬಿಟ್ಟಿರಲು ತಲೆ ಆಗುವುದು ಸುಡಗಾಡು//

ಮರ್ಕಟದ ವಂಶದ ನೀನು ಚಲುವೆ
ನನ್ನರಮನೆಯಲಿ  ಅಡಗಿ ಕುಳಿತಿರುವೆ
ಬೇರಲ್ಲ ಹುಡುಕಿ ಬಸವಳಿಯತಿರುವೆ
ಬಾಕಳ್ಳಿಮನಸೆ ಸವಾರಿನಡೆಸುತಿರುವೆ//


                ಬಸನಗೌಡ ಗೌಡರ

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...