Tuesday, May 12, 2020

* ಕಂದನ ನಂದನ *

ಅರಿವಿನ ಪರಿದಿಯೊಳ ಅನುದಿನವು
ಅನುರಣನ,ಅಂತ:ಕರಣ ಸುಧೇ ಗಾನ
ಮನೆ ಮನೆಯು ಗಂಧರ್ವ ಗಾನ
ಮಗುವಿರುವ ಮನೆ ಸಂಗೀತ ತಾನ/

ಭಗವಂತ ನೀಡಿದ ಅದು ಶ್ರೇಷ್ಟ ದಾನ
ತೊದಲು ನುಡಿಯದು ಮೇಲ ಆಲಾಪ
ರಾಗ ಲಯ ತಾಳ ಮಧುರ ಗೀತಗಾನ
ನಮ್ಮ ಮನೆ ಮೀರಿಸಿದಾವುದು ತಾನ /

ಸಪ್ತ ಸ್ವರಗಳು ಮೇಳೈಸಿ ಸವಿ ನೆನಪು
ಮನೆಮನಗಳ ಸ್ವರ ಸಿಂಚನದ ತಂಪು
ಗೆಜ್ಜೆಯ ಹೆಜ್ಜೆಯ ನರ್ತನದ ನಾದಕೆ
ದೇವ ಲೋಕವೇ ಜಾರಿ ಬಂತು ಜಗಕೆ /

ಕಂದನಿರುವಾ ಮನೆ ನಂದಗೋಕುಲ
ನಿತ್ಯವೂ ಆಲಾಪ ನವನೂತನ ಕಲಾಪ
ಮನೆ ಮನ ಮಂದಿರಕೆ ನಿತ್ಯಮಂದಾರ
ಸತ್ಯವಿದು ಜಗಕೆ ಸನ್ಮಾನದ ಹಂದರ /

ಭಾವ ಬಂಧನವ ಮೀರಿ ಬಹು ದೂರ
ಜಾವ ಪ್ರತಿ ಕ್ಷಣ ಜಾರಿ ಕಷ್ಟ ಸಂಹಾರ
ಭುವಿಯ ಸಂತಸದ ಕ್ಷಣ ನೀ ಆಧಾರ
ನವಮಾಸವುಂಡ ನೋವೀಗಪರಿಹಾರ

                     ಬಸನಗೌಡ ಗೌಡರ

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...