Monday, May 18, 2020

* ತೆಪ್ಪ ಪಯಣ *

ತುಂಬಿದ ಹೂಳೆಯದು ನನ್ನೂರಿನ,
ನಂಬಿ ಬಂದವರು ನೂರಾರು ಜನ
ದಡ ತಲುಪಿಸಬೇಕು ಕಡೆ ನನ್ನವರನ್ನು
ಸುಳಿಗಳು ಕಾಯುತಿವೆ ಸೋತವರನ್ನು//

ತೆಪ್ಪವ ತಯಾರಿಸಿದೆ ನನಗೊಪ್ಪಿದಂತೆ
ಸಪ್ಪೆಯಂತಲ್ಲ ಸವಿಯಾದ ಪಯಣ
ಒಪ್ಪಿಸಿದ  ಜಾಗಕ್ಕೆ ತಲುಪಿಸಬೇಕಿವರನು
ತಪ್ಪಿನಡೆದವನಲ್ಲ ಸತ್ಯದಿ ನಡೆದವನು//

ಹೊಳೆಯ ತುಂಬಿದೆ, ಕೊಳೆ ಸಾವಿರಾರು
ಜಾಳಿಗೆ ಹಾಕಿ ಹೊರತೆಗೆಯುವೆ ನೂರಾರು .
ಕಲ್ಮಶವೆಂದು ಕೈಲಾಗದೆಂದು ಬಿಡುವರೇನು?
ತಪ್ಪದೆ ಬದುಕಿನ ದಡ ತಲುಪಿಸುವೆನಿವರನು//

ಸತ್ಯವೆಂಬ ಹುಟ್ಟು ,ಸ್ನೇಹವೆಂಬ ತೆಪ್ಪ,
ಸೆಳುವೆ ಸವಾಲು,ಬಾಗುತ ಸಾಗುವೆ .
ದಡವ ತಲುಪಲು ಗಡಿಬಿಡಿಯೆ ಶಾಪ
ದೂರದ ದಾರಿಯ ಗುರಿ ತಲುಪಿಸುವೆ.//

ತೆಪ್ಪದ ತೂತಿಗೆ ಸವಿಯ ಮುತ್ತಿಗೆ ಹಾಕಿ
ಸಕಲರ ಕರದ ಸಹಕಾರದಿಂದ ಜೀಕಿ
ಬಿರುಗಾಳಿಗೆ ಬಗ್ಗದೆ ತೂರೆ ಸೀಳಬೇಕು
ಸಾವೆಂದರು ಹಿತವಾಗಿ ಸ್ವೀಕರಿಸಬೇಕು//

              ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...