Monday, May 18, 2020

* ಸಹಜ ನಗು *

ನಿಸರ್ಗದ ಕುಡಿಗಳು ನೀವು
ನಿಮ್ಮೆತ್ತರಕೆ ಏರಲಾರೆವು ನಾವು
ನಿಮ್ಮ ಬದುಕು ಖರೀದಿಸಬಹುದು
ನಿಮ್ಮ ನಗುವು ಖರೀದಿಸಲಾರೆವು /

ನಿಷ್ಕಲ್ಮಶ ನಗುವಿಗೆ ಸರಿಸಮವುಂಟೆ
ನಿಸರ್ಗದೆತ್ತರಕ್ಕೆ ನಾವೇರಲುಂಟೆ
ಹುಸನ್ಮುಖದ ನಗು ಹೂವಿನೂಂದಿಗೆ
ಪೈಪೋಟಿ ಇಳಿದು ಧಾವಿಸುತಿದೆ/

ಸಹೋದರಿಯ ಆಪ್ತ ಸಹಬಾಳು
ಒಡಲೊಳಗೇ ಚೀರುವ,ಗೋಳು
ಅಂಬರದರಸಿದ ತಂಗಿ ಸಹಜಬಾಳು
ನಿತ್ಯ ರೈತ ಮಕ್ಕಳ ನಿಸರ್ಗದ ದೂಳು/

ಕಾನ್ವೆಂಟ ಶರ್ಟ, ಟೈ ಬೂಟು ಹಾಕಿ
ಕಲಿತು ಹೆಮ್ಮೆಯಲಿ ಕಡಲು ದಾಟಿ
ಕೂರೋನಕೆ ತತ್ತರಿಸಿ ತವರು ನೆನಪಿಸಿ
ಬಾಗಿದಸಹೋದರರೆ ಹೂವು ಸ್ವಾಗತ/

              ಬಸನಗೌಡ ಗೌಡರ 

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...