Sunday, May 24, 2020

* ನಿಸರ್ಗ ಮಗು *





ಮಾಸದ ನಗುವಿನ ಹಸನ್ಮಖ ಮಗು
ಕೆಸರು, ಮಾಸುವ ದೇಹಕ್ಕೆ, ಮನಕ್ಕಲ್ಲ.
ನಗುವಿನಲ್ಲಿ ಸಂದೇಶ ನೀಡಿದೆ ಶರಣು
ಮಗು ಮಾನವ ತಂದೆ ನಿಜ ಮಗು //

ಇತಿಹಾಸ ಹಂಗಿಲ್ಲ ಭವಿಷ್ಯಚಿಂತೆಯಿಲ್ಲ
ಬಂದಂತೆ ಸ್ವೀಕರಿಸುವೆ ಸಂತೆಯೆಲ್ಲಾ
ಬದುಕುವ ಹಠವೂಂದೆ ಜೀವನದಲ್ಲಿ
ಬರಿ ಬೊಗಳೆ ಮಾತಿಗೆ ಬೆಲೆಯಿಲ್ಲ//

ಮಣ್ಣಿಂದ ಜಗವು ಮಣ್ಣಿಂದ ಬೆಲೆಯು
ಮಣ್ಣಿಂದರೆ ಹೆದರುವುದು ಜಗವೆಲ್ಲ
ಅನ್ನವನು ಉಣ್ಣುವುದು ಮಣ್ಣಿಂದಲೆ
ಮಣ್ಣಿಂದಾದ ಕೆಸರಿಗೇಕೆ ನಾನಂಜಲಿ//

ಅಪ್ಪ ಅಮ್ಮ ಯಾರೆಂದು ತಿಳಿದಿಲ್ಲ
ತಿಳಿದಿದ್ದರೆ ಕಟ್ಟಿ ಹಾಕುತಿದ್ದರೇನೊ ನನ್ನ
ದಿನ ಬೆಳಗಾದರೆ ವೈದ್ಯ, ಇಂಜಿನಿಯರ
ಹಪ ಹಪಿಸಿ ಕೊಲ್ಲುತ್ತಿದ್ದರೇನೂ ನನ್ನ//

                ಬಸನಗೌಡ ಗೌಡರ


No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...