Wednesday, May 6, 2020

* ಪ್ರಯಾಣ. *

ಬಾಳ ದೋಣಿಯ ಪ್ರಯಣಿಗ ನಾನು
ಸಹ ಪ್ರಯಣಿಗರ ನೆನಪು ಮಧುರ
ನೂರು ಜನ ಸೇರಿದರು ನೂರು ತರ
ಬದುಕೆಲ್ಲ ಒಂದೊಂದುತರ ..ತರ...

ಸಂಗಾತಿ ಸರಸ ಸಹಜೀವನ ಸಾಗಿತು,
ನಿರಂತರ ಸವಿ  ಸವಿ ಸಂಸಾರ ತೇರ.
ಸಂಗೀತ ಉಲ್ಲಾಸ ಮನೆ ಮಂದಿರ
ಸಾವಿರ ದಿನಗಳ ಸಿಹಿ ಮಂದಾರ ದರ..

ಕಡಲ ಒಡಲೊಳ ದೋಣಿ ಸಿರಿ ನಡೆ
ಕಹಿ ನೆನಪುಗಳು ಬರಿ ಆಕಡೆ ಈಕಡೆ
ಕವಲು ಒಡೆಯದೆ ನನ್ನ ದೀರ್ಘ ನಡೆ
ಕಷ್ಟಕಾರ್ಪಣ್ಯ ಸೋಲದ  ನಡೆ..ನಡೆ..

ಸಾವಿರ ನದಿಗಳು ಸಂಗಮ ಕಡಲು
ಸಾರ ಸವಿಯದೆ ಸಪ್ಪೆ ನಾ ಬಿಡಲು
ಸಾಗಿದ ರೀತಿಗೆ ಸಾಗರ ನಾಚಿತು
ಸವಾಲುಗಳೆಲ್ಲ ಸರಿದವು ಸರ.. ಸರ ..

ಸಾಗಿದ ದಾರಿಯ ಸವಿ ಸವಿ ನೆನಪು
ಸವಿಯಲು ನನಗೆ ದೇವರ ಕರುಣೆ
ಪ್ರಾಣಿಗಿಂತ ನಾ ಭಿನ್ನ  ಓ ದೆವರಾಣೆ
ದಯೆಯೆ ಬಾರದೆ ಬಿದ್ದೆ, ಹರೊ..ಹರ..

                 ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...