Friday, May 22, 2020

* ಚಾರುಲತೆ *

ಸ್ಪರ್ಧೆ: ಪ್ರೇಮಗೀತೆ .

ಕ್ರಮ ಸಂಖ್ಯೆ: 13

* ಚಾರುಲತೆ *

ನನ್ನೊಲಮೆ ಬಯಸಿತು ಚಾರುಲತೆ
ಹಾಡುವೆ ಕೊಗಿಲೆಯ ಧ್ವನಿಯಾಗಿ
ರಾಗತಾಳ ಮೇಳೈಸಿ ಸ್ವರಮಾಲೆಯಾಗಿ
ಭಾವ ಸ್ವೀಕರಿಸು ಪುಳಕ ಅಲೆಯಾಗಿ/ಪ/

ಬಿರುಬಿಸಿಲು ಕಾರ್ಮೋಡ ತೇಲಿಸಿ
ಬಾಗಿ ಮುಂಗಾರು ಮಳೆ ಸುರಿಸು
ಗುಡುಗು ಮಿಂಚು ಬಿರುಗಾಳಿಗೆ ಬಗ್ಗದೆ
ಸಿಂಚನ ಸ್ವೀಕರಿಸುವೆ ಭುವಿಯಾಗಿ.//

ಬೃಂದಾವನ ಭೃಂಗದ ಸಂಗೀತ ಆಲಿಸಿ
ವಿರಹವೇರಿದ ವರ ಮಹಾಕವಿಯಾಗಿ
ರಚಿಸುವೆ ಕವನ ಮಹಾಕಾಳಿದಾಸನಾಗಿ
ಹಾಡು ನಾ ಸ್ವೀಕರಿಸುವೆ ಪ್ರೇಮಿಯಾಗಿ.//

ನನ್ನಂತರಂಗ ಭಾವತರಂಗ ಚಿಲುಮೆ
ನಾ ಬೆಸೆಯುವೆ ಹೃದಯದ ಒಲುಮೆ
ಪ್ರತಿದಿನ ಮನೆ ಮನ ಮಹಾನವಮಿ
ಸ್ವೀಕರಿಸಿವೆ ದಸರೆಯ ಗೊಂಬೆಯಾಗಿ.//

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...