Friday, August 14, 2020

* ಮೌನ ರಾಗ *

* ಮೌನ ರಾಗ *

ನನ್ನ ನಿನ್ನ ನಡುವೆ ಎನಿತು ಅಂತರ

ದೇಹವೆರಡು ಉಸಿರೊಂದು ಸದಾ ಹಸಿರು

ಅರಿತು ನಡೆದಾಗ ಬಾಳು ಸುಂದರ /ಪ/ 

 

ಹೃದಯ ಬಾರ ತಾಳದೆ, ಅರಳು ನೀ

ಅಳುವ ನುಂಗಿ, ನಗುವುದೆಮ್ಮ ಜೀವನ

ಉಸಿರು ಹಸಿರಾಗಿ ಬದುಕದು ಪಾವನ/

 

ನೂರು ಕಾಲ ಜೀಕೊಣ ಸಿಹಿಬಾಳು 

ಬದುಕು ಬರಡಲ್ಲ ಬಂಗಾರದ ಹವಳ

ಉಸಿರಿಲ್ಲದೆಯೂ ಹೆಸರು ನೂರ್ಕಾಲು/ 

 

ಸಿರಿಸಿಂಚನ ಕಣ್ಣಂಚಿಗೆ ಸಂಚಲನ

ಮಿಂಚಂತೆ ಬೆಳಕು ಬಯಲು ಕಿರಣ

ಸದಾಚಾರ ಸದ್ವಿಚಾರ ಚರಾಚರ/

 

ಮನದ ಯುಗಳ ಗೀತೆ ಹಾಡಿ ಕುಣಿದು

ಮರೆತು ಕ್ಲೇಷ, ಪಾಲಿಸಿದಾಗ ಮೌನರಾಗ

ತಿಳಿದು ಬದುಕಿದಾಗ ಬಾಳೆ ಬಂಗಾರ/

 

                 ಬಸನಗೌಡ ಗೌಡರ 



            


No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...