Saturday, September 12, 2020

* ಅಧಿಕಾರ ಮೌನ *


ಅಳೆದು ತೂಗಿ ಮೌನದಲಿ ಹೊಲಸು 

ಮರೆಮಾಡಿ ಮರೆಯಬೇಡ ಮೂಢ

ಹುಳವಾಡಿ ಕೊಳೆತು ತೇಲಿತು ಕೇಡು

ಬೆಳಕಿಗಿಲ್ಲ ಬರವು ಅದು ರವಿ ಹಾಡು//


ಬೆಕ್ಕಿಗೂ ಕೊರಮರ ಬಲೆಯ ಭಯ 

ಸೊಕ್ಕಿ ನಡೆದರೆ ಅದು ಉಕ್ಕಿದ ಸಾರು 

ಲೆಕ್ಕ ವಿಡದೆ ಬಿಡುವನೇನು ಮಹಾಶಿವ

ಪಕ್ಕೆಲಬು ಮುರಿದು ಕಕ್ಕಿಸದೆ ಬಿಡನು//


ಅಧಿಕಾರ ಮೂರುದಿನದ ಸಂತೆ ಕಂತೆ

ಎತ್ತಿ ಮೆರೆದವರ ಬಾಳು ಸದಾ ಹಸಿರು

ಎತ್ತದೆ ಮೆರೆದವರ ಕತ್ತು ಬರಿ ಮೇಲು  

ಸತ್ತ ಮೇಲೂ ಕಾಡುವುದು ಗರ್ವ ಫಲ//


ಅಣಬೆ ಆಯುಷ್ಯ ಅಲ್ಪ, ಆಹಾರದ

ಮನೆ ಸೇರಿದ ಮರುಗಳಗೆ ಅಮೃತ

ಅರಿಯದೆ  ಮೆರೆದರದು ಕಾಣುವ ಕಂಬ

ಬರಿ ಹುಳಗಳೆ ಸೇರುವುವು ಮೈತುಂಬ //


            ಬಸನಗೌಡ ಗೌಡರ 


 
 

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...