Monday, September 14, 2020

* ವಸಂತ ಮಾಸ *

ವಸಂತ ಬಂದ ಜಗದ ತಮಕೊಂದ 
ಸಂತೋಷದ ಸವಿಯದು ಶ್ರೀಗಂಧ
ಮಾವು ಬೇವಿಗೂ ಮಂದ ಹಾಸ
ಜೀವ ಸಂಕುಲಕರಳಿತು ಕೈಲಾಸ //

ಋತುವಿನ ಶೃಂಗದ ನೃತ್ಯ ಅಭಂಗ
ಮೈಮನದಲ್ಲೇಳುತಿದೆ ಭಾವತರಂಗ
ಭುವಿಯಾಗಿದೆ ಸಂಗೀತದ ನವರಂಗ
ಮೇಳೈಸಿದೆ ಕೋಗಿಲೆಗಳಂತರಂಗ//

ಹೋಂಗೆಯ ಹೂವಿನ ಮಕರಂದ
ಚೆಂಗುಲಾಬಿಯ ಮೋಹಕ ಅಂದ
ಭೃಂಗದ ಜೇಂಕಾರ ಮಹದಾನಂದ  
ಸವಿಯಬೇಕು ಸಂತ ವಿನಯದಿಂದ//

ಕವಿಯ ಕಲ್ಪನೆ ಕೋಗಿಲೆ ಕೂಗಿಗೆ
ಅರಳಿತು ಜುಳು ಜುಳು ತೊರೆಯಾಗಿ
ಕರಳು ಕುಡಿಗಳ ಬೆರಳು ತುದಿಗೆ
ಆಟದ ಪಾಠ ಕಳೆಕಟ್ಟಿತು ಬೆಸುಗೆ//

ಹೊಸತನ ಪಸರಿಸಿ ನಸುನಗೆ ಪೇರಿಸಿ
ಹುಸಿನಗು ತುಳಿದನು ದಿನಕರ ಸೋಸಿ
ಕನಸನು ಕಟ್ಟುವ ಮನಸನು ಬಿತ್ತಿ
ಹರುಷವ ತೇಲಿಸಿ ನಡೆದನು ಕೈ ಎತ್ತಿ//  

       ✒.ಬಸನಗೌಡ ಗೌಡರ 
   

 

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...